ADVERTISEMENT

ದಕ್ಷಿಣ ಭಾರತ ಮಟ್ಟದ ಅಂತರ ಕಾಲೇಜು ಕ್ರೀಡಾಕೂಟ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2023, 16:09 IST
Last Updated 28 ಮಾರ್ಚ್ 2023, 16:09 IST
ನಿಟ್ಟೆ ಕ್ಯಾಂಪಸ್‌ನಲ್ಲಿ ಆಯೋಜಿಸಿರುವ 11ನೇ ನಿಟ್ಟೆ ಅಕೊಲೇಡ್ಸ್ ಕ್ರೀಡಾಕೂಟಕ್ಕೆ ವೈದ್ಯಕೀಯ ಅಕಾಡೆಮಿ ಡೀನ್ ಡಾ ಪಿ.ಎಸ್. ಪ್ರಕಾಶ್ ಚಾಲನೆ ನೀಡಿದರು
ನಿಟ್ಟೆ ಕ್ಯಾಂಪಸ್‌ನಲ್ಲಿ ಆಯೋಜಿಸಿರುವ 11ನೇ ನಿಟ್ಟೆ ಅಕೊಲೇಡ್ಸ್ ಕ್ರೀಡಾಕೂಟಕ್ಕೆ ವೈದ್ಯಕೀಯ ಅಕಾಡೆಮಿ ಡೀನ್ ಡಾ ಪಿ.ಎಸ್. ಪ್ರಕಾಶ್ ಚಾಲನೆ ನೀಡಿದರು   

ಉಳ್ಳಾಲ: ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯ ಅಧೀನದ ಕೆ.ಎಸ್. ಹೆಗ್ಡೆ ವೈದ್ಯಕೀಯ ಅಕಾಡೆಮಿ ಸಂಘಟಿಸಿದ 11ನೇ ‘ನಿಟ್ಟೆ ಅಕೊಲೇಡ್ಸ್’ ದಕ್ಷಿಣ ಭಾರತದ ವೈದ್ಯಕೀಯ, ದಂತವೈದ್ಯಕೀಯ ವಿಭಾಗದ ವಿದ್ಯಾರ್ಥಿಗಳ ಅಂತರ ಕಾಲೇಜು ಮಟ್ಟದ ಮೂರು ದಿನಗಳ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವು ದೇರಳಕಟ್ಟೆಯ ಕ್ಷೇಮ ಕ್ಯಾಂಪಸ್‌ನ ಬಿ.ಸಿ. ಆಳ್ವ ಇಂಡೋರ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಕೆ.ಎಸ್. ಹೆಗ್ಡೆ ವೈದ್ಯಕೀಯ ಅಕಾಡೆಮಿಯ ಡೀನ್ ಡಾ.ಪಿ.ಎಸ್ ಪ್ರಕಾಶ್ ಅವರು, ಕ್ರೀಡಾಕೂಟದಲ್ಲಿ ಭಾಗವಹಿಸಲು 25 ಕಾಲೇಜಿನ ವಿದ್ಯಾರ್ಥಿಗಳು ಬಂದಿದ್ದಾರೆ ಎಂದರು.

ವಿದ್ಯಾರ್ಥಿಗಳಿಗಾಗಿ ಬಾಸ್ಕೆಟ್ ಬಾಲ್, ವಾಲಿಬಾಲ್, ಶಟಲ್, ಟೇಬಲ್ ಟೆನಿಸ್, ಥ್ರೋಬಾಲ್ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಕ್ಷೇಮ ಆಡಳಿತ ವಿಭಾಗದ ವೈಸ್ ಡೀನ್ ಡಾ. ಜೆ.ಪಿ ಶೆಟ್ಟಿ, ಅಕಾಡೆಮಿಕ್ಸ್ ವೈಸ್ ಡೀನ್ ಡಾ.ಅಮೃತ್ ಮಿರಾಜ್‍ಕರ್, ನಿಟ್ಟೆ ಫಿಸಿಯೊಥೆರಪಿ ಕಾಲೇಜು ಪ್ರಾಂಶುಪಾಲ ಡಾ. ದಾನೇಶ್ ಕುಮಾರ್, ಉಪಪ್ರಾಂಶುಪಾಲ ನಾರಾಯಣ ಚಾರ್ಯೂಲು ಇದ್ದರು.
ನಿಟ್ಟೆ ವಿ.ವಿ ಕ್ರೀಡಾ ವಿಭಾಗದ ಉಪನಿರ್ದೇಶಕ ಡಾ.ಮುರಳೀಕೃಷ್ಣ ವಿ. ಸ್ವಾಗತಿಸಿದರು. ಪ್ರತಿಯುಷಾ ನಿರೂಪಿಸಿದರು. ಅದ್ವೈತ್ ವಂದಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.