ADVERTISEMENT

ಎಸ್ಸೆಸ್ಸೆಲ್ಸಿ: ಅಲೋಶಿಯಸ್‌ಗೆ ಶೇ 97.35 ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 9 ಮೇ 2023, 16:12 IST
Last Updated 9 ಮೇ 2023, 16:12 IST
ಸ್ತುತಿ
ಸ್ತುತಿ   

ಮಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ನಗರದ ಸೇಂಟ್ ಅಲೋಶಿಯಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಶೇ 97.35 ಸಾಧನೆ ಮಾಡಿದ್ದಾರೆ.

11 ವಿದ್ಯಾರ್ಥಿಗಳು ಶೇ 95ಕ್ಕೂ ಹೆಚ್ಚು ಅಂಕ ಗಳಿಸಿದ್ದು, ಒಟ್ಟು 26 ವಿದ್ಯಾರ್ಥಿಗಳು ಶೇ 90ಕ್ಕೂ ಅಧಿಕ ಅಂಕ ಪಡೆದಿದ್ದಾರೆ. ವಿವಲ್ ರಿವಾ ಡಿಸೋಜ (ಶೇ 98.4), ಕೆ. ಅಜಯ್ ಭಟ್ (ಶೇ 97.12), ಸ್ತುತಿ ನಾಯಕ್ (ಶೇ 96.8), ಸಿಮ್ರನ್ ಡಿಸೋಜ (ಶೇ 96.48), ಬೆವನ್ ಜೋಶುವಾ ಡಿಸೋಜ (ಶೇ 96.16), ಕೌಶಿಕ್ ಪಿ. ಸಾಲಿಯಾನ್ (ಶೇ 96) ಅವರು ಮೊದಲ ಆರು ಸ್ಥಾನಗಳನ್ನು ಪಡೆದಿದ್ದಾರೆ. ಒಟ್ಟು 189 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 184 ಜನರು ಉತ್ತೀರ್ಣರಾಗಿದ್ದಾರೆ ಎಂದು ಶಾಲೆಯ ಪ್ರಕಟಣೆ ತಿಳಿಸಿದೆ.

ಸಿಮ್ರನ್
ಅಜಯ್
ಬೆವನ್
ಕೌಶಿಕ್
ವಿವಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT