ADVERTISEMENT

ಕೃಷಿಕರ ಸ್ವಾಭಿಮಾನ ಬದುಕಿಗೆ ಸಂಶೊಧನೆ ಅಗತ್ಯ

ಸುಬ್ರಹ್ಮಣ್ಯ: ಕಿದುವಿನಲ್ಲಿ ಎರಡು ದಿನಗಳ ಕೃಷಿ ಮೇಳಕ್ಕೆ ಎಸ್ ಆರ್ ಸತಿಶ್ಚಂದ್ರ ಚಾಲನೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2019, 12:10 IST
Last Updated 12 ಅಕ್ಟೋಬರ್ 2019, 12:10 IST
 ಸುಬ್ರಹ್ಮಣ್ಯ ಸಮೀಪದ ಕಿದು ತೆಂಗು ಸಂಶೋಧನಾ ಕೇಂದ್ರದಲ್ಲಿ ಎರಡು ದಿನಗಳ ಕೃಷಿ ಮೇಳ ಹಾಗೂ ತೋಟಗಾರಿಕಾ ಮೇಳವನ್ನು ಕ್ಯಾಂಪ್ಕೊ ಅಧ್ಯಕ್ಷ ಎಸ್ ಆರ್ ಸತಿಶ್ಚಂದ್ರ ಉದ್ಘಾಟಿಸಿದರು
 ಸುಬ್ರಹ್ಮಣ್ಯ ಸಮೀಪದ ಕಿದು ತೆಂಗು ಸಂಶೋಧನಾ ಕೇಂದ್ರದಲ್ಲಿ ಎರಡು ದಿನಗಳ ಕೃಷಿ ಮೇಳ ಹಾಗೂ ತೋಟಗಾರಿಕಾ ಮೇಳವನ್ನು ಕ್ಯಾಂಪ್ಕೊ ಅಧ್ಯಕ್ಷ ಎಸ್ ಆರ್ ಸತಿಶ್ಚಂದ್ರ ಉದ್ಘಾಟಿಸಿದರು   

ಸುಬ್ರಹ್ಮಣ್ಯ: ‘ರೈತರಿಗೆ ತಾಂತ್ರಿಕತೆ ನೀಡಿದಲ್ಲಿ ಆದಾಯ ದ್ವಿಗುಣದ ಜತೆಗೆ ದೇಶದ ಆರ್ಥಿಕ ಸ್ಥಿತಿ ಸುಭದ್ರವಾಗಿರಲು ಸಾಧ್ಯ. ಆಗ ಕೃಷಿಕರು ಸ್ವಾಭಿಮಾನದ ಬದುಕಲು ಸಾಧ್ಯ’ ಎಂದು ಕ್ಯಾಂಪ್ಕೊ ಅಧ್ಯಕ್ಷ ಎಸ್. ಆರ್. ಸತಿಶ್ಚಂದ್ರ ಹೇಳಿದರು.

ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ ಕಿದು ಸಂಶೋಧನಾ ಕೇಂದ್ರದಲ್ಲಿ ಶನಿವಾರ ಆರಂಭಗೊಂಡ ಎರಡು ದಿನಗಳ ಕೃಷಿ ಮತ್ತು ತೋಟಗಾರಿಕಾ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿ ನಿತ್ಯಾನಂದ ಮುಂಡೋಡಿ ಮಾತನಾಡಿ, ‘ ಕೃಷಿ ಕ್ಷೇತ್ರದಲ್ಲಿ ಆಧುನಿಕತೆ ಬಂದಿದ್ದರೂ ನಿರೀಕ್ಷಿತ ಸಾಧನೆ ಸಾಧ್ಯವಾಗಿಲ್ಲ. ಕೃಷಿ ಕ್ಷೇತ್ರದಲ್ಲಿ ಹೊಸ ಅಧ್ಯಾಯಗಳು ನಡೆಯುತ್ತಿಲ್ಲ. ಕೃಷಿ ಪದ್ಧತಿಯಲ್ಲಿ ಪ್ರಗತಿ ಸಾಧನೆ ಸಮಾಧಾನಕರವಾಗಿಲ್ಲ’ ಎಂದರು.

ADVERTISEMENT

ಪುತ್ತೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಕೃಷಿ ಪ್ರಕಟನೆಗಳನ್ನು ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ಬಿಳಿನೆಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾರದಾ ದಿನೇಶ್, ಜಿಲ್ಲಾಪಂಚಾಯಿತಿ ಸದಸ್ಯ ಪಿ.ಪಿ ವರ್ಗಿಸ್, ಗ್ರಾಮಪಂಚಾಯಿತಿ ಸದಸ್ಯ ಸತೀಶ್ ಕಳಿಗೆ, ಕೃಷಿ ನಿರ್ದೇಶಕ ಭಾನುಪ್ರಕಾಶ್, ಪುತ್ತೂರು ಐಸಿಎಆರ ಡಿಸಿಆರ್ ನಿರ್ದೇಶಕ ಡಾ. ಗಂಗಾಧರ ನಾಯಕ್, ಹಾಗೂ ಸಿಪಿಸಿಆರ್‌ಐ ನಿರ್ದೇಶಕರು ಉಪಸ್ಥಿತರಿದ್ದರು.

ಐಸಿಎಆರ್ ಅಧಿಕಾರಿಗಳಾದ ಡಾ. ಕೆ ಮುರಳೀಧರನ್, ಡಾ. ವಿ ನಿರಾಳ್, ಡಾ. ಕದ್ಕೆ ಗಣೇಶ್ ನವನ್ನಾಥ್, ಕಾಸರಗೋಡು ಸಿಪಿಸಿಆರ್‌ಐ ವಿಜ್ಞಾನಿಗಳು, ಅಧಿಕಾರಿಗಳು, ವಿವಿಧ ಭಾಗಗಳ ಕೃಷಿಕರು, ಸುಬ್ರಹ್ಮಣ್ಯ ಮತ್ತು ಕಡಬ ಕಾಲೇಜುಗಳ ವಿದ್ಯಾಥರ್ಿಗಳು ಉಪಸ್ಥಿತರಿದ್ದರು. ಸಿಪಿಸಿಆರ್ಐ ಉತ್ಪಾದನಾ ವಿಭಾಗ ಮುಖ್ಯಸ್ಥ ಡಾ ರವಿ ಸ್ವಾಗತಿಸಿದರು. ಪ್ರಧಾನ ವಿಜ್ಞಾನಿ ಡಾ. ಕೆ ಸಂಶುದ್ದೀನ್ ವಂದಿಸಿದರು. ನಾಗರಾಜ ಕಾರ್ಯಕ್ರಮ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.