ADVERTISEMENT

ಉಪ್ಪಿನಂಗಡಿ | ಬೈಕ್‌ಗೆ ಟ್ಯಾಂಕರ್ ಡಿಕ್ಕಿ: ವಿದ್ಯಾರ್ಥಿಗಳಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 4:54 IST
Last Updated 16 ಅಕ್ಟೋಬರ್ 2025, 4:54 IST
ಉಪ್ಪಿನಂಗಡಿ ಕೂಟೇಲು ಸೇತುವೆ ಬಳಿ ಅಪಘಾತಕ್ಕೀಡಾಗಿ ರಸ್ತೆ ಮತ್ತೊಂದು ಬದಿಗೆ ತಿರುಗಿರುವ ಟ್ಯಾಂಕರ್  
ಉಪ್ಪಿನಂಗಡಿ ಕೂಟೇಲು ಸೇತುವೆ ಬಳಿ ಅಪಘಾತಕ್ಕೀಡಾಗಿ ರಸ್ತೆ ಮತ್ತೊಂದು ಬದಿಗೆ ತಿರುಗಿರುವ ಟ್ಯಾಂಕರ್     

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75ರ ಇಲ್ಲಿನ ಕೂಟೇಲು ಸೇತುವೆ ಬಳಿ ಮಂಗಳವಾರ ಟ್ಯಾಂಕರ್‌ವೊಂದು ಬೈಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ವಿದ್ಯಾರ್ಥಿಗಳಿಬ್ಬರು ಗಂಭೀರವಾಗಿ‌ ಗಾಯಗೊಂಡಿದ್ದಾರೆ.

ಹಿರೇಬಂಡಾಡಿ ಗ್ರಾಮದ ನಿವಾಸಿ ಯತೀಶ್,  ಉಪ್ಪಿನಂಗಡಿ ಪೇಟೆ ನಿವಾಸಿ ಅವನೀಶ್ ಗಾಯಗೊಂಡವರು. ಈ ಇಬ್ಬರು ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಮಧ್ಯಾಹ್ನ ಊಟಕ್ಕೆಂದು ಉಪ್ಪಿನಂಗಡಿ ಕಡೆಯಿಂದ ಕೂಟೇಲುನಲ್ಲಿರುವ ಕ್ಯಾಂಟೀನ್‌ಗೆ ತೆರಳುತ್ತಿದ್ದಾಗ ಟ್ಯಾಂಕರ್  ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT