ADVERTISEMENT

ದಕ್ಷಿಣ ಕನ್ನಡ: ಕೇಂದ್ರ ಮಾರುಕಟ್ಟೆಯಲ್ಲಿ ವ್ಯಾಪಾರ ಆರಂಭ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2020, 8:24 IST
Last Updated 28 ಸೆಪ್ಟೆಂಬರ್ 2020, 8:24 IST

ಮಂಗಳೂರು: ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನಗರದ ಕೇಂದ್ರ ಮಾರುಕಟ್ಟೆಯ ಕೆಲವು ಅಂಗಡಿಗಳು ಭಾನುವಾರ ತೆರೆದಿದ್ದವು. ಆದರೆ ಕೇಂದ್ರ ಮಾರ್ಕೆಟ್‌ನ ಮುಖ್ಯ ದ್ವಾರಗಳು ಮಾತ್ರ ಇನ್ನೂ ಮುಕ್ತವಾಗಿಲ್ಲ.

ಸೋಮವಾರದಿಂದ ಪಾಲಿಕೆ ಅಧಿಕಾರಿಗಳು ವಿದ್ಯುತ್ ಮತ್ತು ನೀರು ಪೂರೈಕೆ ಆರಂಭಿಸಿ, ಮಾರುಕಟ್ಟೆ ವ್ಯಾಪಾರ ಪುನರಾರಂಭಿಸಲು ಅವಕಾಶ ಮಾಡಿಕೊಡಬಹುದು ಎಂಬ ಆಶಾಭಾವನೆಯನ್ನು ವ್ಯಾಪಾರಿಗಳು ಹೊಂದಿದ್ದಾರೆ. ಈ ಮಧ್ಯೆ ಮಾರುಕಟ್ಟೆಯ ಆಸುಪಾಸಿನ ಬೀದಿಬದಿ, ಪುರಭವನ ಮತ್ತು ಲೇಡಿಗೋಶನ್ ಆಸ್ಪತ್ರೆ ಬಳಿಯ ತಾತ್ಕಾಲಿಕ ಅಂಗಡಿಗಳಲ್ಲೂ ವ್ಯಾಪಾರ ಬಿರುಸಾಗಿ ನಡೆಯಿತು.

ಕೆಲದಿನಗಳ ಹಿಂದೆ ಸೆಂಟ್ರಲ್ ಮಾರುಕಟ್ಟೆಯಲ್ಲಿ ಕಾನೂನುಬದ್ಧ ವ್ಯಾಪಾರ ಚಟುವಟಿಕೆಗೆ ಅನುಮತಿ ನೀಡುವಂತೆ ಹೈಕೋರ್ಟ್ ನಿರ್ದೇಶಿಸಿದ ಮೇರೆಗೆ, ಮಾನ್ಯತೆ ಪಡೆದ ವ್ಯಾಪಾರ ಪರವಾನಗಿ ಹೊಂದಿರುವ ವ್ಯಾಪಾರಿಗಳು ವಾಣಿಜ್ಯ ಪರವಾನಗಿ ಪತ್ರ, ಗುರುತುಪತ್ರ ಸೇರಿದಂತೆ ಎಲ್ಲ ಪುರಾವೆ, ದಾಖಲೆಯೊಂದಿಗೆ ಪಾಲಿಕೆ ಆಯುಕ್ತರನ್ನು ಸಂಪರ್ಕಿಸಲು ತಿಳಿಸಿತ್ತು. ಅದರಂತೆ ಹಲವು ವ್ಯಾಪಾರಿಗಳು ದಾಖಲೆ ಸಲ್ಲಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.