ADVERTISEMENT

‘ತುಳು ಗ್ರಾಮ’ ನಿರ್ಮಾಣಕ್ಕೆ ಚಿಂತನೆ

ಕೊಣಾಜೆ: ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟ ಉದ್ಘಾಟನೆಯಲ್ಲಿ ಯು.ಟಿ. ಖಾದರ್

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2022, 5:46 IST
Last Updated 1 ನವೆಂಬರ್ 2022, 5:46 IST
ಮಂಗಳೂರು ವಿಶ್ವವಿದ್ಯಾಲಯದ ಒಳಾಂಗಣ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಪ್ರಾಥಮಿಕ‌, ಪ್ರೌಢಶಾಲಾ ಬಾಲಕ ಬಾಲಕಿಯರ ಕುಸ್ತಿ ಟೂರ್ನಿಯನ್ನು ಯು.ಟಿ.ಖಾದರ್‌ ಉದ್ಘಾಟಿಸಿದರು. ಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯ ಇದ್ದರು
ಮಂಗಳೂರು ವಿಶ್ವವಿದ್ಯಾಲಯದ ಒಳಾಂಗಣ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಪ್ರಾಥಮಿಕ‌, ಪ್ರೌಢಶಾಲಾ ಬಾಲಕ ಬಾಲಕಿಯರ ಕುಸ್ತಿ ಟೂರ್ನಿಯನ್ನು ಯು.ಟಿ.ಖಾದರ್‌ ಉದ್ಘಾಟಿಸಿದರು. ಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯ ಇದ್ದರು   

ಮುಡಿಪು: ಕೊಣಾಜೆಯಲ್ಲಿ ಸುಮಾರು ಐದು ಎಕರೆಯಲ್ಲಿ ತುಳುನಾಡಿನ ಸಂಸ್ಕೃತಿಯನ್ನು ಪರಿಚಯಿಸುವ ‘ತುಳು ಗ್ರಾಮ’ ರೂಪಿಸುವ ಯೋಜನೆಯನ್ನು ಮಾಡಲಾಗುತ್ತಿದೆ ಎಂದು ವಿಧಾನ ಸಭೆಯಲ್ಲಿನ ವಿಪಕ್ಷದ ಉಪನಾಯಕ ಯು.ಟಿ.ಖಾದರ್ ಹೇಳಿದರು.

ಜಿಲ್ಲಾ ಪಂಚಾಯಿತಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ರಾಮಕೃಷ್ಣ ಅನುದಾನಿತ ಪ್ರೌಢಶಾಲೆ ಆಶ್ರಯದಲ್ಲಿ ಸೋಮವಾರ ಮಂಗಳೂರು ವಿಶ್ವವಿದ್ಯಾಲಯದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಾಥಮಿಕ‌, ಪ್ರೌಢಶಾಲಾ ಮಟ್ಟದ ಬಾಲಕ ಬಾಲಕಿಯರ ಕುಸ್ತಿ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

ಈ ಭಾಗವು ಶೈಕ್ಷಣಿಕ ಕೇಂದ್ರವಾಗಿ ರೂಪುಗೊಂಡಿದ್ದು, ಇದರೊಂದಿಗೆ ಈ ಭಾಗದಲ್ಲಿ ಸುಸಜ್ಜಿತ ಈಜುಕೊಳ, ಅಂತರರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣವಾಗಲಿದೆ. ಈಗ ಸಾಂಸ್ಕೃತಿಕ ಸ್ಪರ್ಶ ನೀಡಲಾಗುವುದು ಎಂದರು.

ADVERTISEMENT

ಮುಖಂಡ ಸಂತೋಷ್ ಕುಮಾರ್ ಬೋಳಿಯಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಭುವನೇಶ್, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ರವಿಶಂಕರ್, ಕೊಣಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂಚಲಾಕ್ಷಿ, ಉಪಾಧ್ಯಕ್ಷ ರಾಮಕೃಷ್ಣ ಪಟ್ಟೋರಿ, ಪ್ರಮುಖರಾದ ರವೀಂದ್ರ ರೈ ಹರೇಕಳ, ಪ್ರಮೋದ್ ಕುಮಾರ್, ಅಬ್ದುಲ್ ಸತ್ತಾರ್, ಲಕ್ಷ್ಮಣ್ , ಮೋಹನ್ ಶಿರ್ಲಾಲ್, ಕೆ.ಎಂ.ಕೆ ಮಂಜನಾಡಿ, ವಿಷ್ಣು ಹೆಬ್ಬಾರ್, ಮಹಮ್ಮದ್ ಮುಸ್ತಫಾ, ಉಷಾಲತಾ, ಪ್ರಸಾದ್ ರೈ ಕಲ್ಲಿಮಾರ್,ಶಿಕ್ಷಕ ವಿಶಂಕರ್, ತ್ಯಾಗಂ ಹರೇಕಳ ಇದ್ದರು.

ಹರೇಕಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಬದ್ರುದ್ದೀನ್ ಹರೇಕಳ ಅಧ್ಯಕ್ಷತೆ ವಹಿಸಿದ್ದರು.

ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾದ ವಿನೋದ್ ಕುಮಾರ್, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ದಯಾನಂದ ಮಾಡ,‌ ಕಾರ್ಯಪ್ಪ ರೈ , ಚಿತ್ರಕಲಾ ಶಿಕ್ಷಕ ಹರಿಶ್ಚಂದ್ರ ಅವರನ್ನು ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.