ಉಳ್ಳಾಲ: ತಾಲ್ಲೂಕು ವ್ಯಾಪ್ತಿಯ ತಲಪಾಡಿ, ಕೋಟೆಕಾರು, ಬೀರಿ, ತೊಕ್ಕೊಟ್ಟು ಜಂಕ್ಷನ್, ಅಸೈಗೋಳಿ, ಕೊಣಾಜೆ, ಮುಡಿಪು ಭಾಗಗಳಲ್ಲಿ ಅಂಗಡಿಗಳನ್ನು ಮುಚ್ಚಲಾಗಿತ್ತು.
ವೆಳಿಗ್ಗೆ ಸಿಟಿ ಬಸ್‌ಗಳು ಸಂಚಾರ ಆರಂಭಿಸಿದ್ದವು. ಪಂಪ್‌ವೆಲ್ ಬಳಿ ಬಸ್ ಸಂಚಾರಕ್ಕೆ ಅಡ್ಡಿ ಹಾಗೂ ಇನೋಳಿ ಕಡೆಯಿಂದ ಉರ್ವಸ್ಟೋರ್‌ನತ್ತ ತೆರಳುತ್ತಿದ್ದ ಖಾಸಗಿ ಬಸ್ ಗಾಜಿಗೆ ಕಲ್ಲೆಸೆದ ಪರಿಣಾಮ ತಲಪಾಡಿ, ಕೊಣಾಜೆ, ಮುಡಿಪು, ಬಿ.ಸಿ.ರೋಡ್ ಮಾರ್ಗವಾಗಿ ಸಂಚರಿಸುವ ಎಲ್ಲ ಬಸ್‌ಗಳು ಸಂಚಾರ ಸ್ಥಗಿತಗೊಳಿಸಿದವು.
ಉಳ್ಳಾಲ ಉರುಸ್, ದೇರಳಕಟ್ಟೆ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜುಗಳಿಗೆ ಬರುವ ಪ್ರಯಾಣಿಕರು ಬಸ್‌ಗಳಿಲ್ಲದೆ ಆಟೊರಿಕ್ಷಾಗಳನ್ನು ಅವಲಂಬಿಸಬೇಕಾಯಿತು.
ಉಳ್ಳಾಲ ಉರೂಸ್ ಪ್ರಯುಕ್ತ ಶುಕ್ರವಾರ ನಡೆಯಬೇಕಾಗಿದ್ದ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.