ADVERTISEMENT

ಉನ್ನತೀಕರಿಸಿದ ಪ್ರಯೋಗಾಲಯ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 1:34 IST
Last Updated 26 ನವೆಂಬರ್ 2021, 1:34 IST
ಮೂಡುಬಿದಿರೆಯ ಆಳ್ವಾಸ್‌ನಲ್ಲಿ ಆತ್ಮ ರಿಸರ್ಚ್‌ ಸೆಂಟರ್‌ನ ಉನ್ನತೀಕರಿಸಿದ ಪ್ರಯೋಗಾಲಯವನ್ನು ಡಾ.ಎಂ. ಮೋಹನ ಅಳ್ವ ಉದ್ಘಾಟಿಸಿದರು. ಡಾ.ಸುಬ್ರಹ್ಮಣ್ಯ ಪದ್ಯಾಣ, ಡಾ.ಸಜಿತ್ ಇದ್ದರು.
ಮೂಡುಬಿದಿರೆಯ ಆಳ್ವಾಸ್‌ನಲ್ಲಿ ಆತ್ಮ ರಿಸರ್ಚ್‌ ಸೆಂಟರ್‌ನ ಉನ್ನತೀಕರಿಸಿದ ಪ್ರಯೋಗಾಲಯವನ್ನು ಡಾ.ಎಂ. ಮೋಹನ ಅಳ್ವ ಉದ್ಘಾಟಿಸಿದರು. ಡಾ.ಸುಬ್ರಹ್ಮಣ್ಯ ಪದ್ಯಾಣ, ಡಾ.ಸಜಿತ್ ಇದ್ದರು.   

ಮೂಡುಬಿದಿರೆ: ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಆಳ್ವಾಸ್ ಪಾರಂಪರಿಕ ಔಷಧ ಭಂಡಾರ ಮತ್ತು ಸಂಶೋಧನಾ ಕೇಂದ್ರದ (ಆತ್ಮ ರಿಸರ್ಚ್ ಸೆಂಟರ್) ಉನ್ನತೀಕರಿಸಿದ ಪ್ರಯೋಗಾಲಯವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ. ಎಂ. ಮೋಹನ್ ಆಳ್ವ ಬುಧವಾರ ಉದ್ಘಾಟಿಸಿದರು.

ಈ ಸಂಶೋಧನಾ ಕೇಂದ್ರದ ಮೂಲಕ ವಿವಿಧ ಔಷಧೀಯ ಸಸ್ಯಗಳ ವಿಶೇಷ ಸಂಶೋಧನೆ ಮಾಡಿ, ಅದರಲ್ಲಿರುವ ರಾಸಾಯನಿಕ ಸಂಘಟನೆಗಳನ್ನು ವಿಘಟಿಸಿ, ಚಿಕಿತ್ಸೆಗೆ ಉಪಯೋಗಿಸುವ ಅಂಶಗಳನ್ನು ಸಂಗ್ರ
ಹಿಸಲಾಗುವುದು. ಇದನ್ನು ಔಷಧಗಳ ಮೂಲಕ ಜನರಿಗೆ ತಲುಪುವಂತೆ ಮಾಡುವುದು ಕೇಂದ್ರದ ಉದ್ದೇಶ
ವಾಗಿದೆ ಎಂದರು. ಸೆಂಟರ್‌ನ ನಿರ್ದೇಶಕ ಡಾ ಸುಬ್ರಹ್ಮಣ್ಯ ಪದ್ಯಾಣ ಸ್ವಾಗತಿಸಿದರು. ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ. ಸಜಿತ್ ಎಂ, ಸೆಂಟರ್‌
ಸಂಯೋಜಕರಾದ ಡಾ. ಸೌಮ್ಯಾ ಸರಸ್ವತಿ, ಡಾ ರೋಹನ್ ಫರ್ನಾಂಡಿಸ್, ಡಾ. ಅಂಜಲಿ ಕುಮಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT