ADVERTISEMENT

ಉಪ್ಪಿನಂಗಡಿ ಕಾಲೇಜು ಹಿಜಾಬ್‌ ವಿವಾದ: ಪತ್ರಕರ್ತರ ವಿರುದ್ಧ ವಿದ್ಯಾರ್ಥಿಗಳ ದೂರು

​ಪ್ರಜಾವಾಣಿ ವಾರ್ತೆ
Published 3 ಜೂನ್ 2022, 19:50 IST
Last Updated 3 ಜೂನ್ 2022, 19:50 IST

ಮಂಗಳೂರು: ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ವಿವಾದದ ಕುರಿತು ಮಾಹಿತಿ ಪಡೆಯಲು ಗುರುವಾರ ಕಾಲೇಜಿಗೆ ಹೋಗಿದ್ದ ಕೆಲವು ಪತ್ರಕರ್ತರಿಗೆ ವಿದ್ಯಾರ್ಥಿಗಳು ದಿಗ್ಬಂಧನ ಹಾಕಿರುವ ಸಂಬಂಧ ಪತ್ರಕರ್ತ ಅಜಿತ್‌ಕುಮಾರ್ ದೂರು ನೀಡಿದ್ದರು. ಪ್ರತಿಯಾಗಿ ವಿದ್ಯಾರ್ಥಿಗಳು ಮೂವರು ಪತ್ರಕರ್ತರ ವಿರುದ್ಧ ಶುಕ್ರವಾರ ಪ್ರತಿದೂರು ನೀಡಿದ್ದಾರೆ.‘ಉಪ್ಪಿನಂಗಡಿ ಕಾಲೇಜಿಗೆ ಶುಕ್ರವಾರ ಮಧ್ಯಾಹ್ನ ಸುಮಾರು 11.30ಕ್ಕೆ ವಿದ್ಯಾರ್ಥಿಗಳಲ್ಲದ ಮೂವರು ಅಪರಿಚಿತರು ಅಕ್ರಮವಾಗಿ ಪ್ರವೇಶ ಮಾಡಿದ್ದರು. ಶಾಲನ್ನು ಎಳೆಯಲು ಯತ್ನಿಸಿದ್ದರು’ ಎಂದು ದೂರುದಾರರು ಉಪ್ಪಿನಂಗಡಿ ಪೊಲೀಸ್‌ ಠಾಣೆಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.