ಉಪ್ಪಿನಂಗಡಿ: ಇಲ್ಲಿನ ನೇತ್ರಾವತಿ ಸೇತುವೆಯಿಂದ ಬಸ್ ನಿಲ್ದಾಣದ ಬಳಿಯ ವೃತ್ತದವರೆಗಿನ 255 ಮೀಟರ್ ರಸ್ತೆಗೆ ಪುನರ್ ಡಾಂಬರೀಕರಣ ಕಾಮಗಾರಿಗೆ ಶಾಸಕ ಅಶೋಕ್ ಕುಮಾರ್ ರೈ ಶಿಲಾನ್ಯಾಸ ನೆರವೇರಿಸಿದರು.
ಈ ರಸ್ತೆಯ ಅಭಿವೃದ್ಧಿಗೆ ₹ 10 ಲಕ್ಷ ಅನುದಾನ ಇರಿಸಿದ್ದು, ಗುಣಮಟ್ಟದ ಡಾಂಬರೀಕರಣಕ್ಕೆ ಸೂಚಿಸಲಾಗಿದೆ. ಉಪ್ಪಿನಂಗಡಿ-ಗುರುವಾಯನಕೆರೆ
ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿಸುವ ಪ್ರಯತ್ನದ ನಡುವೆ ಈ ಅನುದಾನದ ಕಾಮಗಾರಿ ತಾತ್ಕಾಲಿಕ ನೆಲೆಯದ್ದಾಗಿದೆ ಎಂದರು.
ಪ್ರಮುಖರಾದ ಮುರಳೀಧರ ರೈ ಮಠಂತಬೆಟ್ಟು, ಪಂಚಾಯಿತಿ ಸದಸ್ಯರಾದ ಯು.ಟಿ.ತೌಸೀಫ್, ಅಬ್ದುಲ್ ರಹಿಮಾನ್, ವರ್ತಕ ಸಂಘದ ಉಪಾಧ್ಯಕ್ಷ ಶಬೀರ್ ಕೆಂಪಿ, ಮಹಮ್ಮದ್ ಕೂಟೇಲು, ಮಜೀದ್, ಆದಂ ಕೊಪ್ಪಳ, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಕಾನಿಷ್ಕ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.