ADVERTISEMENT

ಉಪ್ಪಿನಂಗಡಿ |‘ಶ್ರದ್ಧಾ ಕೇಂದ್ರ: ರಾಜಕೀಯ, ಜಾತಿ ಮುಕ್ತವಾಗಲಿ’

ಉಪ್ಪಿನಂಗಡಿ ಸಾರ್ವಜನಿಕ ಗಣೇಶೋತ್ಸವ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 6:44 IST
Last Updated 30 ಆಗಸ್ಟ್ 2025, 6:44 IST
ಉಪ್ಪಿನಂಗಡಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಧಾರ್ಮಿಕ ಸಭೆಯಲ್ಲಿ ರವೀಶ್ ಪಡುಮಲೆ ಮಾತನಾಡಿದರು
ಉಪ್ಪಿನಂಗಡಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಧಾರ್ಮಿಕ ಸಭೆಯಲ್ಲಿ ರವೀಶ್ ಪಡುಮಲೆ ಮಾತನಾಡಿದರು   

ಉಪ್ಪಿನಂಗಡಿ: ‘ಧಾರ್ಮಿಕ ಶ್ರದ್ಧಾ ಕೇಂದ್ರಗಳು ಜಾತಿ ಮತ್ತು ರಾಜಕೀಯದಿಂದ ಮುಕ್ತವಾಗಬೇಕು. ಆಗ ಮಾತ್ರ ಹಿಂದೂ ಸಮಾಜ ಬಲಾಢ್ಯವಾಗಲು ಸಾಧ್ಯ’ ಎಂದು ಉಜಿರೆ ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ, ದೈವ ನರ್ತಕ ರವೀಶ್ ಪಡುಮಲೆ ಹೇಳಿದರು.

ಉಪ್ಪಿನಂಗಡಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ನಡೆಯುತ್ತಿರುವ 49ನೇ ಸಾರ್ವಜನಿಕ ಗಣೇಶೋತ್ಸವದಲ್ಲಿ ಗುರುವಾರ ರಾತ್ರಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು.

ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಸುನೀಲ್ ಕುಮಾರ್ ದಡ್ಡು, ಟೀಮ್ ದಕ್ಷಿಣಕಾಶಿ ಅಧ್ಯಕ್ಷ ಪ್ರಸನ್ನ ಪೆರಿಯಡ್ಕ ಮಾತನಾಡಿದರು.

ADVERTISEMENT

2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 621 ಅಂಕ ಪಡೆದು ರಾಜ್ಯದಲ್ಲಿ 5ನೇ ರ್‍ಯಾಂಕ್‌ ಪಡೆದ ಉಪ್ಪಿನಂಗಡಿಯ ನಿಹಾಲ್ ಎಚ್.ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ವಿಶ್ವಹಿಂದೂ ಪರಿಷತ್‌ ಬಜರಂಗದಳ ಉಪ್ಪಿನಂಗಡಿ ಪ್ರಖಂಡದ ಅಧ್ಯಕ್ಷ ಸುದರ್ಶನ್, ಮುಖಂಡರಾದ ಅರುಣ್ ಕುಮಾರ್ ಪುತ್ತಿಲ, ಧನ್ಯಕುಮಾರ್ ರೈ, ಕರುಣಾಕರ ಸುವರ್ಣ, ವಿದ್ಯಾಧರ ಜೈನ್, ಕೃಷ್ಣ ಕೋಟೆ, ಶೀಲಾ ಶೆಟ್ಟಿ, ಉಷಾ ಮುಳಿಯ, ಸುರೇಶ್ ಅತ್ರೆಮಜಲು, ಗೋಪಾಲ ಹೆಗ್ಡೆ, ವಿಜಯಕುಮಾರ್ ಕಲ್ಲಳಿಕೆ, ರಾಜಗೋಪಾಲ ಭಟ್ ಕೈಲಾರ್,
ಚಂದ್ರಹಾಸ್ ಹೆಗ್ಡೆ, ಯತೀಶ್ ಶೆಟ್ಟಿ ಭಾಗವಹಿಸಿದ್ದರು.

ಕೆ.ಸುಧಾಕರ ಶೆಟ್ಟಿ ಸ್ವಾಗತಿಸಿ, ಜಯಪ್ರಕಾಶ್ ಶೆಟ್ಟಿ ವಂದಿಸಿದರು. ಉದಯಕುಮಾರ್ ಯು.ಎಲ್. ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.