ADVERTISEMENT

ಮೂಲ್ಕಿ: ಭಕ್ತಿ ಭಾವದ ಸಂಕೇತವಾಗಿ ಶ್ರೀ ವರಮಹಾಲಕ್ಷ್ಮೀ ವ್ರತ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2023, 12:44 IST
Last Updated 25 ಆಗಸ್ಟ್ 2023, 12:44 IST
ಮೂಲ್ಕಿ ಬಳಿಯ ಹಳೆಯಂಗಡಿಯ ಬ್ರಹ್ಮಶ್ರೀನಾರಾಯಣಗುರು ಮಂದಿರದಲ್ಲಿ ಬಿಲ್ಲವ ಸಮಾಜ ಸೇವಾ ಸಂಘದ ಸಂಯೋಜನೆಯಲ್ಲಿ ಸಾಮೂಹಿಕ ಶ್ರೀವರಮಹಾಲಕ್ಷ್ಮಿ ವ್ರತಪೂಜೆ ನಡೆಯಿತು
ಮೂಲ್ಕಿ ಬಳಿಯ ಹಳೆಯಂಗಡಿಯ ಬ್ರಹ್ಮಶ್ರೀನಾರಾಯಣಗುರು ಮಂದಿರದಲ್ಲಿ ಬಿಲ್ಲವ ಸಮಾಜ ಸೇವಾ ಸಂಘದ ಸಂಯೋಜನೆಯಲ್ಲಿ ಸಾಮೂಹಿಕ ಶ್ರೀವರಮಹಾಲಕ್ಷ್ಮಿ ವ್ರತಪೂಜೆ ನಡೆಯಿತು   

ಮೂಲ್ಕಿ: ತಾಲ್ಲೂಕಿನ ವಿವಿಧೆಡೆ ಮಹಿಳೆಯರು ವರಮಹಾಲಕ್ಷ್ಮಿ ವ್ರತ ಪೂಜೆಯನ್ನು ಸಾಮೂಹಿಕವಾಗಿ ಆಚರಿಸಿದರು.

ಮೂಲ್ಕಿಯ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಹಿಳಾ ಸಂಘಟನೆಯಿಂದ, ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ನಾರಾಯಣಗುರು ಮಹಿಳಾ ಮಂಡಳಿಯಿಂದ, ಕಿನ್ನಿಗೋಳಿಯ ಕಾಳಿಕಾಂಬ ಮಹಿಳಾ ಮಂಡಳಿಯಿಂದ, ಕಲ್ಲಾಪು ವೀರಭದ್ರ ಮಹಮ್ಮಾಯಿ ದೇವಸ್ಥಾನದಲ್ಲಿ ಮಹಿಳಾ ಸಮಿತಿಯಿಂದ ಪೂಜೆ, ವ್ರತಾಚರಣೆ ನಡೆಯಿತು.

ಪಡುಪಣಂಬೂರು ಗೌರೀಶಂಕರ ಮಹಾಗಣಪತಿ ದೇವಸ್ಥಾನದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ಪಡುಪಣಂಬೂರು ನಾಲ್ಕೂರು ಪಂಜುರ್ಲಿ ದೈವಸ್ಥಾನದಲ್ಲಿ ಗಾಯಿತ್ರಿ ಮಹಿಳಾ ಸಮಿತಿಯ ಸಂಯೋಜನೆಯಲ್ಲಿ ಪೂಜೆ ನಡೆಯಿತು.

ADVERTISEMENT

ಹಳೆಯಂಗಡಿಯ ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ಬಿಲ್ಲವ ಸಮಾಜ ಸೇವಾ ಸಂಘದ ಸಂಯೋಜನೆಯಲ್ಲಿ, ಸಸಿಹಿತ್ಲುವಿನ ಭಗವತೀ ದೇವಸ್ಥಾನದಲ್ಲಿ ಕೃಷ್ಣಮೂರ್ತಿ ಭಟ್ ಹೊಗೆಗುಡ್ಡೆ ಅವರ ನೇತೃತ್ವದಲ್ಲಿ ವರಮಹಾಲಕ್ಷ್ಮಿ ವ್ರತ ಪೂಜೆ ನಡೆಯಿತು. ಪ್ರಸಾದ ವಿತರಿಸಿ ಅನ್ನಸಂತರ್ಪಣೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.