ADVERTISEMENT

ಸುಳ್ಯ: ಕೊರಗಜ್ಜ ನೇಮದಲ್ಲಿ ವಿಜಯೇಂದ್ರ ಭಾಗಿ

​ಪ್ರಜಾವಾಣಿ ವಾರ್ತೆ
Published 17 ಮೇ 2025, 14:09 IST
Last Updated 17 ಮೇ 2025, 14:09 IST
ಸುಳ್ಯದಲ್ಲಿ ಶನಿವಾರ ನಡೆದ ಕೊರಗಜ್ಜ ನೇಮೋತ್ಸವದಲ್ಲಿ ಬಿ.ವೈ.ವಿಜಯೇಂದ್ರ ಅವರು ಪ್ರಸಾದ ಸ್ವೀಕರಿಸಿದರು. ಭಾಗಿರಥಿ ಮುರುಳ್ಯ, ಕ್ಯಾ.ಬ್ರಿಜೇಶ್ ಚೌಟ ಭಾಗವಹಿಸಿದ್ದರು
ಸುಳ್ಯದಲ್ಲಿ ಶನಿವಾರ ನಡೆದ ಕೊರಗಜ್ಜ ನೇಮೋತ್ಸವದಲ್ಲಿ ಬಿ.ವೈ.ವಿಜಯೇಂದ್ರ ಅವರು ಪ್ರಸಾದ ಸ್ವೀಕರಿಸಿದರು. ಭಾಗಿರಥಿ ಮುರುಳ್ಯ, ಕ್ಯಾ.ಬ್ರಿಜೇಶ್ ಚೌಟ ಭಾಗವಹಿಸಿದ್ದರು   

ಸುಳ್ಯ: ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಸಲ ದೇಶದ ಚುಕ್ಕಾಣಿ ಹಿಡಿಯಬೇಕು ಎಂದು ಹಾರೈಸಿ ಇಲ್ಲಿನ ಜಯನಗರ ಬೂತ್ ಸಮಿತಿ ಹರಕೆ ರೂಪದಲ್ಲಿ ಶನಿವಾರ ನೆರವೇರಿಸಿದ ಕೊರಗಜ್ಜ ದೈವದ ನೇಮೋತ್ಸವದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.

ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ಭಾಗೀರಥಿ ಮುರುಳ್ಯ, ಹರೀಶ್ ಪೂಂಜ, ಕಿಶೋರ್ ಕುಮಾರ್ ಪುತ್ತೂರು, ಪಕ್ಷದ ಮುಖಂಡ ಎಸ್.ಅಂಗಾರ, ದೈವಸ್ಥಾನದ ಪ್ರಮುಖರಾದ ಕೇಶವ ಮಾಸ್ತರ್ ಹೊಸಗದ್ದೆ, ಜಿ.ಜಗನ್ನಾಥ ಜಯನಗರ, ಬಿಜೆಪಿಯ ಸುಳ್ಯ ಪಟ್ಟಣ ಘಟಕದ ಅಧ್ಯಕ್ಷ ಎ.ಟಿ.ಕುಸುಮಾಧರ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT