ADVERTISEMENT

ಏ.27ರಿಂದ ಮಂಗಳೂರಿನಲ್ಲಿ ರಾಜ್ಯ ವುಶು ಚಾಂಪಿಯನ್‌ಷಿಪ್

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2025, 13:53 IST
Last Updated 25 ಏಪ್ರಿಲ್ 2025, 13:53 IST

ಮಂಗಳೂರು: ಏ.27ರಿಂದ 30ರವರೆಗೆ ನಗರದ ಯು.ಎಸ್‌.ಮಲ್ಯ ಒಳಾಂಗಣ ಕ್ರೀಡಾಂಣದಲ್ಲಿ ನಡೆಯುವ ಕರ್ನಾಟಕ ರಾಜ್ಯ ಮಟ್ಟದ 24ನೇ ವುಶು ಚಾಂಪಿಯನ್‌ಷಿಪ್‌ಗೆ ಭರದ ಸಿದ್ಧತೆಗಳು ನಡೆದಿವೆ.

ದಕ್ಷಿಣ ಕನ್ನಡ ಜಿಲ್ಲಾ ವುಶು ಘಟಕವು ಕರ್ನಾಟಕ ವುಶು ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿರುವ ಸ್ಪರ್ಧೆಯಲ್ಲಿ ರಾಜ್ಯ ಬೇರೆ ಬೇರೆ ಜಿಲ್ಲೆಗಳ 600ಕ್ಕೂ ಹೆಚ್ಚು ಕ್ರೀಡಾಪಟುಗಳು, ತರಬೇತುದಾರರು, ನಿರ್ಣಾಯಕರು ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ವುಶು ಸಂಸ್ಥೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶೋಕ ಮೊಕಾಶಿ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಬ್‌ ಜೂನಿಯರ್ (7ರಿಂದ 14 ವರ್ಷ), ಜೂನಿಯರ್ (15ರಿಂದ 18 ವರ್ಷ) ಮತ್ತು ಹಿರಿಯರ ವಿಭಾಗ ಹೀಗೆ ಮೂರು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯುತ್ತವೆ. ವಿಜೇತರಿಗೆ ಪ್ರಶಸ್ತಿ ಪತ್ರ, ಪದಕ, ಹೆಚ್ಚು ಪದಕ ಪಡೆದ ತಂಡಗಳಿಗೆ ಚಾಂಪಿಯನ್ ಟ್ರೋಫಿ ನೀಡಲಾಗುತ್ತದೆ. ಪ್ರಥಮ ಸ್ಥಾನ ಪಡೆದವರನ್ನು ರಾಷ್ಟ್ರೀಯ ಸಬ್ ಜೂನಿಯರ್, ‌ಜೂನಿಯರ್ ಹಾಗೂ ಸೀನಿಯರ್ ವುಶು ಚಾಂಪಿಯನ್‌ಷಿಪ್‌ಗೆ ಕರ್ನಾಟಕ ತಂಡದಿಂದ ಆಯ್ಕೆ ಮಾಡಲಾಗುತ್ತದೆ ಎಂದು ಹೇಳಿದರು. 

ADVERTISEMENT

ಸಂಗಮೇಶ್ ಆರ್‌.ಎಲ್, ರೋಹನ್ ಎಸ್, ಡೇನಿಯಲ್, ಜಯಶ್ರೀ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.