ADVERTISEMENT

ಬಂಟ್ವಾಳ: ಕುಡಿಯುವ ನೀರಿನ ಟ್ಯಾಂಕ್ ಕೊಡುಗೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2021, 6:01 IST
Last Updated 20 ಜೂನ್ 2021, 6:01 IST
ಬಂಟ್ವಾಳ ತಾಲ್ಲೂಕಿನ ರಾಯಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಿದ್ಧಕಟ್ಟೆ ಸಹಕಾರಿ ವ್ಯಾವಸಾಯಿಕ ಸಂಘ ಮತ್ತು ಫಲ್ಗುಣಿ ರೋಟರಿ ಕ್ಲಬ್ ವತಿಯಿಂದ ಕುಡಿಯುವ ನೀರಿನ ಸಿಂಟೆಕ್ಸ್ ಟ್ಯಾಂಕ್ ಅನ್ನು ನೀಡಲಾಯಿತು.
ಬಂಟ್ವಾಳ ತಾಲ್ಲೂಕಿನ ರಾಯಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಿದ್ಧಕಟ್ಟೆ ಸಹಕಾರಿ ವ್ಯಾವಸಾಯಿಕ ಸಂಘ ಮತ್ತು ಫಲ್ಗುಣಿ ರೋಟರಿ ಕ್ಲಬ್ ವತಿಯಿಂದ ಕುಡಿಯುವ ನೀರಿನ ಸಿಂಟೆಕ್ಸ್ ಟ್ಯಾಂಕ್ ಅನ್ನು ನೀಡಲಾಯಿತು.   

ಬಂಟ್ವಾಳ: ಇಲ್ಲಿನ ರಾಯಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಿದ್ಧಕಟ್ಟೆ ಸಹಕಾರಿ ವ್ಯವಸಾಯಿಕ ಸಂಘ ಮತ್ತು ಫಲ್ಗುಣಿ ರೋಟರಿ ಕ್ಲಬ್ ವತಿಯಿಂದ 2,000 ಲೀಟರ್ ಸಾಮರ್ಥ್ಯದ ಕುಡಿಯುವ ನೀರಿನ ಸಿಂಟೆಕ್ಸ್ ಟ್ಯಾಂಕ್ ಅನ್ನು ಶನಿವಾರ ಕೊಡುಗೆಯಾಗಿ ನೀಡಲಾಯಿತು.

ರಾಯಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ, ಸಿದ್ದಕಟ್ಟೆ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು. ರೋಟರಿ ಕ್ಲಬ್ ಅಧ್ಯಕ್ಷ ಮೈಕಲ್ ಡಿಕೋಸ್ತ, ವೈದ್ಯಾಧಿಕಾರಿ ಡಾ. ಮನೋನ್ಮಣಿ, ಪ್ರಮುಖರಾದ ಸಂತೋಷ ಗೌಡ, ಹರೀಶ್ ಆಚಾರ್ಯ ರಾಯಿ, ರಾಜೇಶ್ ಶೆಟ್ಟಿ ಕೊನೆರೋಟ್ಟು, ಮಾಧವ ಶೆಟ್ಟಿಗಾರ್, ಮಂದಾರತಿ ಶೆಟ್ಟಿ, ಶಿವಯ್ಯ. ಎಸ್. ಎಲ್., ಮೋಹನ್ ಜಿ.ಮೂಲ್ಯ, ವಾಸುದೇವ ಆಚಾರ್ಯ, ರಾಜೇಶ್ ನೆಲ್ಯಾಡಿ, ದಿನೇಶ್ ಸುವರ್ಣ ರಾಯಿ, ಎಚ್. ಎ. ರೆಹಮಾನ್, ಬಸವರಾಜ್ ಆಲಿಮಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT