ADVERTISEMENT

ವಾರಾಂತ್ಯದ ಕರ್ಫೂ: ಮಂಗಳೂರು ಸ್ತಬ್ಧ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2021, 5:51 IST
Last Updated 24 ಏಪ್ರಿಲ್ 2021, 5:51 IST
   

ಮಂಗಳೂರು: ರಾಜ್ಯ ಸರ್ಕಾರ ಜಾರಿಗೊಳಿಸಿರುವ ವೀಕೆಂಡ್‌ ಕರ್ಫ್ಯೂ ಶುಕ್ರವಾರ ರಾತ್ರಿಯಿಂದಲೇ ಆರಂಭವಾಗಿದೆ. ಶನಿವಾರ ಬೆಳಿಗ್ಗೆ 6 ರಿಂದ10 ಗಂಟೆಯವರೆಗೆ ಹಾಲು, ತರಕಾರಿ ಮುಂತಾದ ಅಗತ್ಯ ವಸ್ತುಗಳ ಖರೀದಿಗೆಅವಕಾಶ ನೀಡಲಾಗಿದ್ದು, ಬಳಿಕ ಎಲ್ಲವೂ ಬಂದ್‌ ಆಗಿವೆ.

ಬೆಳಿಗ್ಗೆ ನಗರದ ಸೆಂಟ್ರಲ್‌‌ ಮಾರುಕಟ್ಟೆ ಸೇರಿದಂತೆ ಸೂಪರ್‌‌ ಮಾರುಕಟ್ಟೆಗಳು ತೆರೆದಿದ್ದು, ಬೆರಳೆಣಿಕೆಯ ಜನ ಇದ್ದರು. ಇನ್ನು ನಗರದ ಸ್ಟೇಟ್‌‌‌ ಬ್ಯಾಂಕ್‌‌‌ ಬಳಿಯ ಮೀನು ಮಾರುಕಟ್ಟೆ ಗ್ರಾಹಕರಿಲ್ಲದೇ ಬಿಕೋ ಎನ್ನುತ್ತಿತ್ತು.
ವೀಕೆಂಡ್‌ ಕರ್ಫ್ಯೂ ಸಂದರ್ಭ ಅನಗತ್ಯವಾದ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ. ಹಣ್ಣು, ತರಕಾರಿ ಖರೀದಿ, ಪತ್ರಿಕೆ ಮಾರಾಟ ಹಾಗೂ ಪತ್ರಿಕೆ ಮಾರಾಟ ಹಾಗೂ ಹೊಟೇಲ್‌‌‌ ಪಾರ್ಸೆಲ್‌ ಸೇವೆಗೆ ಅವಕಾಶವಿದೆ.

10 ಗಂಟೆಯ ಬಳಿಕ ಜಿಲ್ಲೆಯಾದ್ಯಂತ ಅಗತ್ಯ ಸಂಚಾರ ಹೊರತುಪಡಿಸಿ ಉಳಿದಂತೆ ಎಲ್ಲಾ ಬಂದ್‌ ಆಗಿವೆ.
ನಗರದ ಹಲವೆಡೆ ಚೆಕ್ ಪೋಸ್ಟ್ ಮಾಡಲಾಗಿದ್ದು, ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ವಿವಿಧೆಡೆ ಭೇಟಿ ನೀಡಿ ಪರಿಶೀಲಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.