ADVERTISEMENT

ಮೊಂಟೆಪದವು ಸಮೀಪ ಮಹಿಳೆ ಅತ್ಯಾಚಾರ, ಹತ್ಯೆ: ಬಿಹಾರದ ಯುವಕನ ಬಂಧನ

​ಪ್ರಜಾವಾಣಿ ವಾರ್ತೆ
Published 17 ಜುಲೈ 2025, 7:34 IST
Last Updated 17 ಜುಲೈ 2025, 7:34 IST
<div class="paragraphs"><p>ಬಂಧನ (ಸಾಂದರ್ಭಿಕ ಚಿತ್ರ)</p></div>

ಬಂಧನ (ಸಾಂದರ್ಭಿಕ ಚಿತ್ರ)

   

ಉಳ್ಳಾಲ: ಮೊಂಟೆಪದವು ಸಮೀಪ ಮಹಿಳೆಯೊಬ್ಬರ ಅತ್ಯಾಚಾರ ನಡೆಸಿ, ಹತ್ಯೆಗೈದು ಮೃತದೇಹವನ್ನು ತೋಟವೊಂದರ ಬಾವಿಯಲ್ಲಿ ಕಲ್ಲು ಕಟ್ಟಿ ಎಸೆದ ಪ್ರಕರಣ ಸಂಬಂಧ ಬಿಹಾರ ಮೂಲದ ಫೈರೋಝ್ ಎಂಬಾತನನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.

ಸಕಲೇಶಪುರ ಮೂಲದ 38 ವರ್ಷದ ಮಹಿಳೆಯ ಮೃತದೇಹ ಮೇ 29 ರಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. 

ADVERTISEMENT

ಆರೋಪಿ ಫೈರೋಝ್ ಸ್ಥಳೀಯ ಮರದ ಮಿಲ್‌ನಲ್ಲಿ ಕೆಲಸಕ್ಕಿದ್ದ. ತೋಟದ ಬಾವಿಯ ಸಮೀಪ ಪಂಪ್ ಹಾಕುವ ವಿಚಾರದಲ್ಲಿ ಅಲ್ಲೇ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಮಹಿಳೆ ಹಾಗೂ ಫೈರೋಝ್ ನಡುವೆ ಗಲಾಟೆ ನಡೆದಿತ್ತು. ಆಗ ಫೈರೋಝ್ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಬಳಿಕ ಮೂರ್ಚೆ ತಪ್ಪಿ ಬಿದ್ದ ಮಹಿಳೆಯನ್ನು ಆಕೆಯ ಬಾಡಿಗೆ ಮನೆಗೆ ಹೊತ್ತೊಯ್ದ ಅತ್ಯಾಚಾರವೆಸಗಿ ಸೊಂಟಕ್ಕೆ ಕಲ್ಲು ಕಟ್ಟಿ ಸಮೀಪದ ತೋಟದ ಬಾವಿಗೆ ಎಸೆದಿದ್ದ ಎಂದು ಮೂಲಗಳು ತಿಳಿಸಿವೆ.

ಮಂಗಳವಾರ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.

ಮಹಿಳೆ ಮೊಬೈಲ್ ಕೊಟ್ಟ ಸುಳಿವು!

ಆರೋಪಿ ಫೈರೋಝ್ ಕೃತ್ಯ ಎಸಗಿದ ನಂತರ ಹತ್ಯೆ ನಡೆಸಿದ ಮಹಿಳೆಯ ಮೊಬೈಲನ್ನು ತನ್ನ ಬಳಿ ಇರಿಸಿಕೊಂಡಿದ್ದ. ಅದನ್ನು ಬಿಹಾರದತ್ತ ಕೊಂಡೊಯ್ದಿದ್ದ ಆರೋಪಿ ಅಲ್ಲಿ ಎರಡು ತಿಂಗಳ ಬಳಿಕ ಆನ್ ಮಾಡಿದ್ದು, ಅದರ ಸುಳಿವಿನ ಮೇಲೆ ಪೊಲೀಸರು ಆರೋಫಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.