ADVERTISEMENT

ಯಕ್ಷಗಾನ ರಂಗದ ಪರಂಪರೆಯ ಕೊಂಡಿ ಬಲಿಪ ಪ್ರಸಾದ ಭಾಗವತ ನಿಧನ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2022, 15:33 IST
Last Updated 11 ಏಪ್ರಿಲ್ 2022, 15:33 IST
ಬಲಿಪ ಪ್ರಸಾದ ಭಾಗವತ
ಬಲಿಪ ಪ್ರಸಾದ ಭಾಗವತ   

ಮೂಲ್ಕಿ: ಯಕ್ಷಗಾನ ರಂಗದ ಪ್ರಸಿದ್ಧ ಭಾಗವತರಾದ ಬಲಿಪ ಪ್ರಸಾದ ಭಟ್ (46) ಸೋಮವಾರ ನಿಧನರಾದರು.

ಗಂಟಲ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ತಂದೆ, ಯಕ್ಷಗಾನ ರಂಗದ ಭೀಷ್ಮ ಎಂದೇ ಪ್ರಸಿದ್ಧಿ ಪಡೆದಿರುವ ಬಲಿಪ ನಾರಾಯಣ ಭಾಗವತರು, ಪತ್ನಿ, ಮೂವರು ಮಕ್ಕಳು ಹಾಗೂ ಮೂವರು ಸಹೋದರರನ್ನು ಅಗಲಿದ್ದಾರೆ.

ಕಟೀಲು ಶ್ರೀದುರ್ಗಾ ಪರಮೇಶ್ವರಿ ಪ್ರಸಾದಿ ದಶಾವತಾರ ಯಕ್ಷಗಾನ ಮಂಡಳಿಯಲ್ಲಿ ಸುಮಾರು ಮೂರು ದಶಕಕ್ಕೂ ಹೆಚ್ಚು ಕಾಲದಿಂದ ಸೇವೆ ಸಲ್ಲಿಸುತ್ತಿದ್ದ ಅವರು, ಇತ್ತೀಚೆಗೆ ಅನಾರೋಗ್ಯದ ಕಾರಣದಿಂದ ಮೇಳಕ್ಕೆ ಹೋಗುತ್ತಿರಲಿಲ್ಲ. ಗಂಟಲ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದರಾದರೂ, ಸೋಮವಾರ ಸಂಜೆ ರೋಗವು ಉಲ್ಬಣಿಸಿದಾಗ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ADVERTISEMENT

ತೆಂಕು ತಿಟ್ಟು ಯಕ್ಷಗಾನ ರಂಗದಲ್ಲಿ ಪರಂಪರೆಯ ಭಾಗವತರಾಗಿ, ನಯವಿನಯ, ಸಜ್ಜನಿಕೆಯಿಂದ ಪ್ರೀತಿಪಾತ್ರರಾಗಿದ್ದ ಅವರು ಪೌರಾಣಿಕ ಪ್ರಸಂಗಗಳನ್ನು ಅತ್ಯುತ್ತಮವಾಗಿ ರಂಗದಲ್ಲಿ ಆಡಿಸಬಲ್ಲವರಾಗಿದ್ದರು.

ಬಲಿಪ ಪರಂಪರೆಯ ಹಾಡುಗಳ ಯಕ್ಷಗಾನ ವೈಭವ: ಪ್ರಜಾವಾಣಿಯ ಫೇಸ್‌ಬುಕ್ ಲೈವ್‌ನಲ್ಲಿ ಭಾಗವಹಿಸಿದ್ದಬಲಿಪ ಪ್ರಸಾದ ಭಾಗವತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.