ADVERTISEMENT

ಬೆಳ್ತಂಗಡಿ| ಯಕ್ಷಗಾನದ ಮುದ; ನಟೇಶ್ ಆಮೋದ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2023, 6:04 IST
Last Updated 6 ಫೆಬ್ರುವರಿ 2023, 6:04 IST
ಪುತ್ತೂರು ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳಿಂದ ನಡೆದ ಯಕ್ಷಗಾನ ವೈಭವ
ಪುತ್ತೂರು ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳಿಂದ ನಡೆದ ಯಕ್ಷಗಾನ ವೈಭವ   

ಬೆಳ್ತಂಗಡಿ: ಸಾಹಿತ್ಯ ಸಮ್ಮೇಳನದ ಮೂರನೇ ದಿನ ಪುತ್ತೂರು ವಿವೇಕಾನಂದ ಕಾಲೇಜಿನ ಲಲಿತಕಲಾ ಸಂಘದ ವಿದ್ಯಾರ್ಥಿಗಳು ನಡೆಸಿಕೊಟ್ಟ ‘ಯಕ್ಷಗಾನ ವೈಭವ’ಕ್ಕೆ ಸಾಹಿತ್ಯಾಭಿಮಾನಿಗಳ ಕರತಾಡನ. ವಿದ್ಯಾರ್ಥಿಗಳು ಯಕ್ಷಗಾನದ ಹಾಡು ಹಾಡಿ ಸಭಿಕರನ್ನು ರಂಜಿಸಿದರು.

ಮಧ್ಯಾಹ್ನದ ಬಳಿಕ ಶಿವಮೊಗ್ಗದ ಪ್ರವಚನಕಾರ ಜಿ.ಎಸ್.ನಟೇಶ್ ನಡೆಸಿಕೊಟ್ಟ ‘ಮಂಕುತಿಮ್ಮನ ಕಗ್ಗ’ ಆಧಾರಿತ ಜೀವನ ಮೌಲ್ಯದ ವಿಶೇಷ ಉಪನ್ಯಾಸಕ್ಕೆ ಸಾಹಿತ್ಯಾಭಿಮಾನಿಗಳು ಮಾರು ಹೋದರು. ಜಿ.ಎಸ್.ನಟೇಶ್ ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಯಾವೊಂದು ಬರಹವನ್ನು ತನ್ನ ಮುಂದೆ ಇಟ್ಟುಕೊಳ್ಳದೆ ಉಪನ್ಯಾಸ ನೀಡಿದರು. ಅವರ ಮಾತುಗಳನ್ನು ಇನ್ನಷ್ಟು ಕೇಳಬೇಕು ಎಂಬ ಮಾತುಗಳು ಸಭಿಕರಿಂದ ವ್ಯಕ್ತವಾದವು. ಆದರೆ ಇತರ ಕಾರ್ಯಕ್ರಮಗಳು ಹೆಚ್ಚು ಸಮಯ ತೆಗೆದುಕೊಂಡದ್ದರಿಂದ ಒಂದು ಗಂಟೆಯ ಅವರ ಉಪನ್ಯಾಸವನ್ನು ಅರ್ಧ ಗಂಟೆಗೇ ಇಳಿಸಬೇಕಾಗಿ ಬಂತು. ನಿವೃತ್ತ ಪ್ರಾಂಶುಪಾಲ ಗಣಪತಿ ಭಟ್ ಕುಳಮರ್ವ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT