ADVERTISEMENT

ಮಂಗಳೂರು: ಯೆನೆಪೋಯದಲ್ಲಿ ‘ತುಳು ಪರ್ಬ’

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 7:09 IST
Last Updated 17 ಆಗಸ್ಟ್ 2025, 7:09 IST
ಯೆನೆಪೋಯ ಕಾಲೇಜಿನ ಆತಿಥ್ಯ ವಿಜ್ಞಾನ ವಿಭಾಗದಿಂದ ತುಳು ಪರ್ಬ ಕಾರ್ಯಕ್ರಮ ನಡೆಸಲಾಯಿತು
ಯೆನೆಪೋಯ ಕಾಲೇಜಿನ ಆತಿಥ್ಯ ವಿಜ್ಞಾನ ವಿಭಾಗದಿಂದ ತುಳು ಪರ್ಬ ಕಾರ್ಯಕ್ರಮ ನಡೆಸಲಾಯಿತು   

ಮಂಗಳೂರು: ಯೆನೆಪೋಯ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸೈನ್ಸ್, ಕಾಮರ್ಸ್ ಹಾಗೂ ಮ್ಯಾನೇಜ್‌ಮೆಂಟ್ ಸಂಸ್ಥೆಯ ಆತಿಥ್ಯ ವಿಜ್ಞಾನ ವಿಭಾಗದ ವತಿಯಿಂದ ‘ತುಳುನಾಡ ಪರ್ಬ 2025’ ಕಾರ್ಯಕ್ರಮ ನಡೆಯಿತು.

ತುಳು ಸಂಪ್ರದಾಯದ ಮಾದರಿಯಲ್ಲಿ ಸಿದ್ಧವಾಗಿದ್ದ ವೇದಿಕೆಯಲ್ಲಿ ‘ಡೆನ್ನಾನ ಡೆನ್ನನ್’ ತುಳುಗೀತೆಯ ಇಂಪು ಕಾರ್ಯಕ್ರಮಕ್ಕೆ ಮುನ್ನುಡಿ ಬರೆಯಿತು.

ನಟಿ ವೆನ್ಸಿಟಾ ಡಯಾಸ್, ಕಲಾವಿದ ಪ್ರಶಾಂತ್ ಸಿ.ಕೆ ಅತಿಥಿಯಾಗಿದ್ದರು. ಪ್ರಾಚಾರ್ಯ ಪ್ರೊ.ಜೀವನ್ ರಾಜ್ ಅಧ್ಯಕ್ಷತೆ ವಹಿಸಿದ್ದರು.‌ ಪ್ರಶಾಂತ್ ಸಿ.ಕೆ. ಅವರು ‘ಅಲೆಲೆ ಯೆರಗ್ ಮದಿಮೆ’ ತುಳುಹಾಡನ್ನು ಹಾಡಿ ರಂಜಿಸಿದರು.

ADVERTISEMENT

ವಿದ್ಯಾರ್ಥಿಗಳು ಯಕ್ಷಗಾನ, ತುಳು ಜನಪದ ನೃತ್ಯ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾರ್ಥಿಗಳು ಸಿದ್ಧಪಡಿಸಿದ್ದ ತುಳುನಾಡ ಸಾಂಪ್ರದಾಯಿಕ ಊಟಕ್ಕೆ ಮೆಚ್ಚುಗೆ ವ್ಯಕ್ತವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.