
ಪ್ರಜಾವಾಣಿ ವಾರ್ತೆ
ವಿಟ್ಲ: ತೆಂಗಿನಕಾಯಿ ಕೀಳುತ್ತಿದ್ದಾಗ ವಿದ್ಯುತ್ ಆಘಾತಗೊಂಡು ಯುವಕ ಮೃತಪಟ್ಟ ಘಟನೆ ಅಳಿಕೆಯಲ್ಲಿ ನಡೆದಿದೆ.
ಅಳಿಕೆ ಗ್ರಾಮದ ಇಬ್ರಾಹಿಂ ಉಸ್ತಾದ್ ಅವರ ಪುತ್ರ ಇಸ್ಮಾಯಿಲ್ (37) ಮೃತಪಟ್ಟ ಯುವಕ. ಕಬ್ಬಿಣದ ದೋಟಿ ಬಳಸಿ ಕಾಯಿ ಕೀಳುತ್ತಿದ್ದ ವೇಳೆ ದೋಟಿ ವಿದ್ಯುತ್ ತಂತಿಗೆ ಸ್ಪರ್ಶಿಸಿ ಅವಘಡ ನಡೆದಿದೆ. ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಅವರು ಮೃತಪಟ್ಟಿದ್ದರು. ಅವರಿಗೆ ಪತ್ನಿ, ಪುತ್ರಿ, ಪುತ್ರ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.