ADVERTISEMENT

ಯೂಟ್ಯೂಬರ್ ಸಮೀರ್‌ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2025, 23:15 IST
Last Updated 24 ಆಗಸ್ಟ್ 2025, 23:15 IST
ಸಮೀರ್‌ ಎಂ.ಡಿ.
ಸಮೀರ್‌ ಎಂ.ಡಿ.   

ಮಂಗಳೂರು: ಧರ್ಮಸ್ಥಳ ಬೆಳವಣಿಗೆ ಕುರಿತು ಕೃತಕ ಬುದ್ಧಿಮತ್ತೆ ನೆರವಿನಿಂದ ತಯಾರಿಸಿದ ವಿಡಿಯೊವನ್ನು ಪ್ರಸಾರ ಮಾಡಿದ್ದಕ್ಕಾಗಿ ದಾಖಲಾಗಿದ್ದ ಪ್ರಕರಣ ಸಂಬಂಧ ‘ದೂತ’ ಯೂಟ್ಯೂಬ್ ಚಾನೆಲ್‌ನ ಎಂ.ಡಿ. ಸಮೀರ್‌ ಅವರನ್ನು ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ಭಾನುವಾರ ವಿಚಾರಣೆಗೆ ಒಳಪಡಿಸಿದರು.

ನಾಲ್ವರು ವಕೀಲರ ಜೊತೆಗೆ ಬೆಳ್ತಂಗಡಿ ಪೊಲೀಸ್‌ ಠಾಣೆಗೆ ಹಾಜರಾದ ಸಮೀರ್‌, 5 ಗಂಟೆ ಠಾಣೆಯಲ್ಲೇ ಇದ್ದರು. ಸೋಮವಾರವೂ ಠಾಣೆಗೆ ಬರುವಂತೆ ಪೊಲೀಸರು ಸೂಚಿಸಿದರು ಎಂದು ಮೂಲಗಳು ತಿಳಿಸಿವೆ.  

‘ಧರ್ಮಸ್ಥಳ ಪ್ರಕರಣದಲ್ಲಿ ಸಾಕ್ಷಿ ದೂರುದಾರ ನ್ಯಾಯಾಲಯದಲ್ಲಿ ನೀಡಿದ್ದ ಮಾಹಿತಿ ಹೊರತಾಗಿ ಇನ್ನಷ್ಟು ಮಾಹಿತಿಯನ್ನು ಕಾಲ್ಪನಿಕವಾಗಿ ಸೃಷ್ಟಿಸಿ 23.52 ನಿಮಿಷದ ವಿಡಿಯೊ ಪ್ರಸಾರ ಮಾಡಿದ್ದರು.

ADVERTISEMENT

ಧರ್ಮಸ್ಥಳದ‌ ಪಾಂಗಾಳ ರಸ್ತೆ ಬಳಿ ಯೂಟ್ಯೂಬರ್‌ಗಳ ಮೇಲೆ ಆ. 6ರಂದು ನಡೆದ ಹಲ್ಲೆಯ ಗಾಯಾಳುಗಳನ್ನು ಮಾತನಾಡಿಸಿ ವರದಿ ಮಾಡಲು ತೆರಳಿದ್ದ ಟಿ.ವಿ. ವಾಹಿನಿಯೊಂದರ ವರದಿಗಾರನಿಗೆ  ಹಲ್ಲೆ ನಡೆಸಿದ ಆರೋಪದ ಮೇಲೆ ಬೆಳ್ತಂಗಡಿ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಹಾಗೂ ಉಜಿರೆಯ ಬೆನಕ ಆಸ್ಪತ್ರೆ ಬಳಿಕ ಅಕ್ರಮವಾಗಿ ಗುಂಪುಗೂಡಿದ ಬಗ್ಗೆ ಬೆಳ್ತಂಗಡಿ ಠಾಣೆಯ ಪೊಲೀಸರು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡ ಪ್ರಕರಣದಲ್ಲೂ ಸಮೀರ್‌ ಆರೋಪಿ ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.