ADVERTISEMENT

ಯುವ ಮಂಡಳಿ ಪ್ರಶಸ್ತಿಗೆ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2022, 15:34 IST
Last Updated 3 ಡಿಸೆಂಬರ್ 2022, 15:34 IST

ಮಂಗಳೂರು: ನೆಹರೂ ಯುವ ಕೇಂದ್ರವು 2021-22ನೇ ಸಾಲಿಗೆ ಜಿಲ್ಲಾ ಯುವ ಮಂಡಳಿ ಪ್ರಶಸ್ತಿ ನೀಡಲು ಯುವಕ ಮಂಡಲ ಹಾಗೂ ಯುವತಿ ಮಂಡಳಿಗಳಿಂದ ಅರ್ಜಿ ಆಹ್ವಾನಿಸಿದೆ.

ಜಿಲ್ಲಾ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಾಣಿಯಾಗಿ, ನೆಹರೂ ಯುವ ಕೇಂದ್ರದಲ್ಲಿ ಸಂಯೋಜನೆ ಹೊಂದಿರುವಯುವಕ ಮಂಡಲ ಅಥವಾ ಯುವತಿ ಮಂಡಳಿಗಳು ಇದೇ 17ರ ಒಳಗೆ ಅರ್ಜಿ ಸಲ್ಲಿಸಬಹುದು. 2021-22ರಲ್ಲಿ ಗ್ರಾಮ , ಪಟ್ಟಣ, ತಾಲ್ಲೂಕುಗಳಲ್ಲಿ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರಬೇಕು. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಸಂಸ್ಥೆಗೆ ₹ 25 ಸಾವಿರ, ರಾಜ್ಯ ಮಟ್ಟದ ಪ್ರಥಮ ಸ್ಥಾನ ಪಡೆಯುವ ಸಂಸ್ಥೆಗೆ ₹ 75ಸಾವಿರ, ದ್ವಿತೀಯ ಸ್ಥಾನಕ್ಕೆ ₹ 50ಸಾವಿರ ಹಾಗೂ ತೃತೀಯ ಸ್ಥಾನಕ್ಕೆ ₹ 25ಸಾವಿರ ಬಹುಮಾನವಿದೆ.

ರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯುವ ಸಂಸ್ಥೆಗ ₹ 3 ಲಕ್ಷ, ದ್ವಿತೀಯ ಸ್ಥಾನಕ್ಕೆ ₹ 1 ಲಕ್ಷ ಹಾಗೂ ತೃತೀಯ ಸ್ಥಾನಕ್ಕೆ ₹ 50 ಸಾವಿರ ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಅರ್ಜಿಯು ರಾಜ್ಯ ಮಟ್ಟದ ಆಯ್ಕೆಗೆ ರಾಷ್ಟ್ರೀಯ ಮಟ್ಟದ ಆಯ್ಕೆಗೆ ಅರ್ಹತೆ ಪಡೆಯುತ್ತದೆ. ನೆಹರೂ ಯುವಕೇಂದ್ರದ ಕಚೇರಿಯಿಂದ ಅರ್ಜಿ ನಮೂನೆ ಹಾಗೂ ಮಾಹಿತಿ ಪಡೆಯಬಹುದು ಎಂದು ಜಿಲ್ಲಾ ಯುವ ಅಧಿಕಾರಿ ರಘುವೀರ್ ಸೂಟರ್‌ಪೇಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ವಿಳಾಸ: ನೆಹರು ಯುವಕೇಂದ್ರ, ಕಂದಾಯ ಭವನ, ನೆಲಮಹಡಿ, ಜಿಲ್ಲಾಧಿಕಾರಿ ಕಚೇರಿ ಆವರಣ, ಮಂಗಳೂರು - 575001.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.