ADVERTISEMENT

ಅಕ್ರಮ ಮರಳು: ರೂ 7ಲಕ್ಷ ದಂಡ ವಸೂಲಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2011, 9:10 IST
Last Updated 9 ಜೂನ್ 2011, 9:10 IST

ಹೊನ್ನಾಳಿ: ಮೇ ತಿಂಗಳೊಂದರಲ್ಲೇ ತಾಲ್ಲೂಕಿನಲ್ಲಿ ಅಕ್ರಮ ಮರಳು ದಂಧೆಕೋರರಿಂದ ರೂ 10,32,500ಗಳಷ್ಟು ದಂಡ ವಸೂಲಿ ಮಾಡಲಾಗಿದೆ, ಅಕ್ರಮ ಮರಳುಗಾರಿಕೆಯಿಂದ ಈವರೆಗೆ ವಸೂಲಾದ ದಂಡ ಒಟ್ಟು ್ಙ 27,58,150 ಎಂದು ತಹಶೀಲ್ದಾರ್ ಎ.ಎಂ. ಶೈಲಜಾ ಪ್ರಿಯದರ್ಶಿನಿ ಹೇಳಿದರು.

ನಾಡಿನ ಸಂಪತ್ತು ಲೂಟಿ ಮಾಡಲು ತಾವು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು ನದಿ ತೀರಗಳ ಗ್ರಾಮಸ್ಥರು ಕೂಡ ತಮ್ಮ ಜವಾಬ್ದಾರಿ ಅರಿತು ನಡೆಯಬೇಕು. ಅಕ್ರಮ ಮರಳು ಸಾಗಾಟಕ್ಕೆ ಅವಕಾಶ ನೀಡಬಾರದು ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬಿದರಗಡ್ಡೆ ಗ್ರಾಮದಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದ ಹರ್ಷ 5 ಬೋಟ್‌ಗಳು ಮತ್ತು 3 ಜೆಸಿಬಿಗಳಿಗೆ ್ಙ 5 ಲಕ್ಷ ದಂಡ ಪಾವತಿಸಿದ್ದಾರೆ. ಬಿದರಗಡ್ಡೆಯಲ್ಲಿ 3500 ಮೆಟ್ರಿಕ್ ಟನ್‌ಗಳಷ್ಟು ಅಕ್ರಮ ಮರಳು ಸಂಗ್ರಹಿಸಿದ್ದ ಬಿ.ಎಚ್. ಗಣೇಶ್ ಹಾಗೂ ಬಿ.ಎಚ್. ಮಹೇಶ್ವರಪ್ಪ ಅವರು ್ಙ 4 ಲಕ್ಷ ದಂಡ ಪಾವತಿಸಿದ್ದಾರೆ. ಹುರುಳಿಹಳ್ಳಿ ಗ್ರಾಮದಲ್ಲಿ 1600 ಮೆಟ್ರಿಕ್ ಟನ್‌ಗಳಷ್ಟು ಅಕ್ರಮ ಮರಳು ಸಂಗ್ರಹಿಸಿದ್ದ ಎನ್.ಜೆ. ಯಲ್ಲಪ್ಪ ಅವರು ್ಙ  1.25 ಲಕ್ಷ ದಂಡ ಪಾವತಿಸಿದ್ದಾರೆ.

ಇದೇ ಗ್ರಾಮದಲ್ಲಿ 10 ಲೋಡ್‌ಗಳಷ್ಟು ಅಕ್ರಮ ಮರಳು ಸಂಗ್ರಹಿಸಿದ್ದ ಪರಮೇಶ್ವರಪ್ಪ ಅವರು ್ಙ 7,500 ದಂಡ ಪಾವತಿಸಿದ್ದಾರೆ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.