ADVERTISEMENT

ಅಣಬೇರು: ನೀರಿನ ಟ್ಯಾಂಕ್ ಶಿಥಿಲ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2013, 8:41 IST
Last Updated 12 ಡಿಸೆಂಬರ್ 2013, 8:41 IST

ಮಾಯಕೊಂಡ: ಸಮೀಪದ ಅಣಬೇರು ಗ್ರಾಮದ ಹೊಸ ಬಡಾವಣೆಯಲ್ಲಿರುವ ನೀರಿನ ಟ್ಯಾಂಕ್್ ಶಿಥಿಲವಾಗಿದ್ದು, ಅದನ್ನು ನೆಲಸಮ ಮಾಡಿ ಆತಂಕ ತಪ್ಪಿಸಲು ಗ್ರಾಮಸ್ಥರು ಮನವಿ ಮಾಡಿದ್ದಾರೆ. ಇಲ್ಲಿನ ಹೊಸ ಬಡಾವಣೆಯಲ್ಲಿ ಗ್ರಾಮಕ್ಕೆ ನೀರೊದಗಿಸಲು ನಿರ್ಮಿಸಲಾದ ನೀರಿನ ಟ್ಯಾಂಕ್ ಅಕ್ಕಪಕ್ಕದ ಮನೆಯವರ ನಿದ್ದೆಗೆಡಿಸಿದೆ.

1987ರಲ್ಲಿ ಕಟ್ಟಿಸಲಾದ ಟ್ಯಾಂಕ್ 1 ಲಕ್ಷ ಲೀಟರ್ ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಟ್ಯಾಂಕ್್ ಅಕ್ಕಪಕ್ಕ ಮನೆಗಳು ನಿರ್ಮಾಣವಾಗಿವೆ. ಮಕ್ಕಳು ಆಡುತ್ತಿರುವಾಗ ದೊಡ್ಡ ಕಾಂಕ್ರೀಟ್್ ಚಕ್ಕಳಗಳು ಮಕ್ಕಳ ಮೇಲೆ ಬೀಳುತ್ತಿವೆ. ಹೀಗೆ ಬಿದ್ದು ಕೆಲ ಮಕ್ಕಳಿಗೆ  ಗಾಯಗಳಾಗಿರುವುದೂ ಉಂಟು.

  ಕಾಂಕ್ರೀಟ್ ಉದುರಿದ್ದು, ಕಬ್ಬಿಣದ ಸರಳುಗಳೂ ತುಕ್ಕು ಹಿಡಿದು ನೆಲಕ್ಕೆ ಬೀಳುತ್ತಿವೆ. ಟ್ಯಾಂಕ್‌ಗೆ ಆಧಾರವಾಗಿರುವ 6 ಪಿಲ್ಲರ್‌ಗಳು ಕೆಳ ಭಾಗದಲ್ಲಿ ದುರ್ಬಲವಾಗಿ, ಜಿಗಿದುಕೊಂಡಿವೆ. ಅಡ್ಡಪಟ್ಟಿಗಳೂ  ಶಿಥಿಲವಾಗಿವೆ.  ‘ಇದು ಬಿದ್ದರೆ  ಅಕ್ಕಪಕ್ಕದ ಮನೆಗಳಿಗೆ ಭಾರೀ ಹಾನಿಯಾಗುವುದರಲ್ಲಿ ಸಂಶಯವಿಲ್ಲ.

ಇದನ್ನು ಶೀಘ್ರ ನೆಲಸಮ ಮಾಡಿ ಬೇರೆ ವ್ಯವಸ್ಥೆ ಮಾಡುವಂತೆ ಜನಪ್ರತಿನಿಧಿ ಗಳಿಗೆ, ಎಂಜಿನಿಯರ್‌ಗಳಿಗೆ ಮಾಡಿದ ಮನವಿಯಿಂದ ಯಾವ ಪ್ರಯೋಜನ ವಾಗಿಲ್ಲ. ನಮ್ಮ ಜೀವಕ್ಕೆ  ಬೆಲೆಯೇ ಇಲ್ಲವಾಗಿದೆ’ ಎಂದು  ನಿವಾಸಿಗಳಾದ  ಜಾಫರ್ ಷರೀಫ್, ರಫೀಕ್ ಮಹ್ಮದ್, ಆಟೋ ಅಬ್ಬು, ವಾಜೀದ್ ಖಾನ್ ಮತ್ತಿತರರು ಆಕ್ರೋಶ ವ್ಯಕ್ತಪಡಿಸಿದರು. ಬಲವಾದ ಗಾಳಿ ಬೀಸಿದರೂ ಅಲುಗಾಡುವ  ಶಿಥಿಲವಾದ ಟ್ಯಾಂಕ್ ನೆಲಸಮಗೊಳಿಸಬೇಕು ಎಂದು ಜೆಡಿಎಸ್್ ಮುಖಂಡ ಅನಿಲ್ ಕುಮಾರ್.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.