ADVERTISEMENT

ಅತ್ಯಾಧುನಿಕ ತಂತ್ರಜ್ಞಾನದ ಪ್ರಯೋಗಾಲಯ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2012, 6:19 IST
Last Updated 17 ಡಿಸೆಂಬರ್ 2012, 6:19 IST

ಹುಬ್ಬಳ್ಳಿ: ವೈದ್ಯಕೀಯ ಪ್ರಯೋಗಾ ಲಯ ಪರೀಕ್ಷೆಗಳಿಗೆ ಖ್ಯಾತವಾದ `ಎಸ್‌ಆರ್‌ಎಲ್ ಡಯಾಗ್ನೋಸ್ಟಿಕ್ಸ್' ಸಂಸ್ಥೆ ವತಿಯಿಂದ ಸುಜ್ಜಿತ ಮತ್ತು ಅತ್ಯಾಧು ನಿಕ ತಂತ್ರಜ್ಞಾನ ಅಳವಡಿಸಿದ ಲ್ಯಾಬೋರಟರಿ ದೇಶಪಾಂಡೆ ನಗರದ ಬಂಗ್ಲೋ ರಸ್ತೆಯಲ್ಲಿ ಭಾನುವಾರ ಆರಂಭಗೊಂಡಿದೆ.

ಈ ಕುರಿತು ಮಾಹಿತಿ ನೀಡಿದ ಲ್ಯಾಬೋರಟರಿ ಮುಖ್ಯಸ್ಥ ಡಾ. ಬಾಲಚಂದ್ರ ಭಟ್, `ಸಂಸ್ಥೆಯಲ್ಲಿ ದಿನನಿತ್ಯದ ಸಾಮಾನ್ಯ ಪರೀಕ್ಷೆಗಳಿಂದ ಆರಂಭಿಸಿ ಅತ್ಯಂತ ಮುಂದುವರಿದ ಪರೀಕ್ಷೆಗಳ ಸಹಿತ 4,000 ಟೆಸ್ಟ್‌ಗಳನ್ನು ನಡೆಸಲಾಗುವುದು' ಎಂದರು.

`ವ್ಯಕ್ತಿಯ ದೇಹದಿಂದ ರಕ್ತವನ್ನು ತೆಗೆಯುವುದರಿಂದ ಆರಂಭಿಸಿ ಅತ್ಯಂತ ನಿಖರವಾದ ಫಲಿತಾಂಶ ನೀಡುವವರೆಗೆ ವಿವಿಧ ಹಂತಗಳನ್ನು ಇಲ್ಲಿ ವ್ಯವಸ್ಥಿತ ವಾಗಿ ನಿರ್ವಹಿಸಲಾಗುವುದು. ವಿಶ್ವದರ್ಜೆಯ ವಿಧಾನ ಬಳಸಿ ರೋಗ ಪತ್ತೆ ಮಾಡಲಾಗುವುದು. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಗುಣ ಮಟ್ಟದ ಮಾನಕಗಳ ಆಧಾರದಲ್ಲಿ ಪರೀಕ್ಷಾ ವರದಿ ನೀಡುವುದರಿಂದ ಇಲ್ಲಿನ ವರದಿ ಹೆಚ್ಚು ಸ್ಪಷ್ಟ ಮತ್ತು ನಿಖರವಾಗಿರುತ್ತದೆ ಎಂಬ ಭರವಸೆ ನಮ್ಮದು' ಎಂದರು.

`ರಕ್ತಕಣಗಳ ಎಣಿಕೆ, ಸಕ್ಕರೆ ಕಾಯಿಲೆ, ಪಿತ್ತಜನಕಾಂಗದ ಕಾರ್ಯ ನಿರ್ವಹಣೆ ಮತ್ತಿತರ ಪರೀಕ್ಷೆಗಳಿಂದ ಆರಂಭಿಸಿ ಎಚ್‌ಐವಿ, ಹೆಪಾಟಿಟಿಸ್ ಬಿ ಮತ್ತು ಸಿ, ಆಹಾರ ತೊಂದರೆಗಳು ಸೇರಿದಂತೆ ಮೈಕ್ರೋಬಯೋಲಜಿ ಮುಂತಾದ ಪರೀಕ್ಷೆಗಳನ್ನೂ ಗುಣ ಮಟ್ಟದ ಸೇವೆಯಾಗಿ ಇಲ್ಲಿ ಒದಗಿಸ ಲಾಗುವುದು.

ಅಲ್ಲದೆ ವಿಶೇಷ ಹೆಲ್ಪ್ ಲೈನ್ ರೂಪಿಸಲಾಗಿದ್ದು ತರಬೇತಿ ಪಡೆದ ಸಿಬ್ಬಂದಿ ಲಭ್ಯರಿರುತ್ತಾರೆ' ಎಂದರು. ಡಾ. ಶಂಕರ ವಿಜಾಪುರ, ಸಂಜಯ್ ನಾಗಪಾಲ್, ರಾಕೇಶ್ ವಾಲಿಯಾ ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT