ADVERTISEMENT

ಇಂಗಳಗೊಂದಿ: ₹ 55 ಲಕ್ಷ ಮೌಲ್ಯದ ಮರಳು ವಶ

​ಪ್ರಜಾವಾಣಿ ವಾರ್ತೆ
Published 17 ಜೂನ್ 2015, 6:31 IST
Last Updated 17 ಜೂನ್ 2015, 6:31 IST
ಮಲೇಬೆನ್ನೂರು ಸಮೀಪದ ಇಂಗಳಗೊಂದಿ ಗ್ರಾಮದ ತುಂಗಭದ್ರಾ ನದಿ ತೀರದಲ್ಲಿ ಕಂದಾಯ, ಪೊಲೀಸ್‌, ಲೋಕೋಪಯೋಗಿ ಬಂದರು ಹಾಗೂ ಜಲಸಾರಿಗೆ ಇಲಾಖೆ ಅಧಿಕಾರಿಗಳು ಸೋಮವಾರ ತಡರಾತ್ರಿ ದಾಳಿ ನಡೆಸಿ ವಶಪಡಿಸಿಕೊಂಡ 1,500 ಲೋಡ್‌ ಮರಳ ರಾಶಿ.
ಮಲೇಬೆನ್ನೂರು ಸಮೀಪದ ಇಂಗಳಗೊಂದಿ ಗ್ರಾಮದ ತುಂಗಭದ್ರಾ ನದಿ ತೀರದಲ್ಲಿ ಕಂದಾಯ, ಪೊಲೀಸ್‌, ಲೋಕೋಪಯೋಗಿ ಬಂದರು ಹಾಗೂ ಜಲಸಾರಿಗೆ ಇಲಾಖೆ ಅಧಿಕಾರಿಗಳು ಸೋಮವಾರ ತಡರಾತ್ರಿ ದಾಳಿ ನಡೆಸಿ ವಶಪಡಿಸಿಕೊಂಡ 1,500 ಲೋಡ್‌ ಮರಳ ರಾಶಿ.   

ಮಲೇಬೆನ್ನೂರು: ಸಮೀಪದ ಇಂಗ ಳಗೊಂದಿ ಗ್ರಾಮದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 6,103 ಘ ಮೀ ಮರಳನ್ನು ಕಂದಾಯ, ಪೊಲೀಸ್‌, ಲೋಕೋಪಯೋಗಿ ಬಂದರು ಹಾಗೂ ಜಲಸಾರಿಗೆ ಇಲಾಖೆ ಅಧಿಕಾರಿಗಳು ಸೋಮವಾರ ತಡರಾತ್ರಿ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.

ಅಧಿಕಾರಿಗಳ ಕಣ್ತಪ್ಪಿಸಿ ತುಂಗಭದ್ರಾ ನದಿ ದಂಡೆಯ ಸರ್ಕಾರಿ ಜಾಗದಲ್ಲಿ ಮರಳುಗಳ್ಳರು ಹೊರಗೆ ಕಳ್ಳಸಾಗಣೆ ಮಾಡಲು ದಾಸ್ತಾನು ಮಾಡಿದ್ದರು ಎನ್ನಲಾಗಿದೆ. ಅಧಿಕಾರಿಗಳ ತಂಡ ಖಚಿತ ಮಾಹಿತಿಯೊಡನೆ ದಾಳಿ ನಡೆಸಿದಾಗ ಈ ಅಕ್ರಮ ಮರಳು ದಾಸ್ತಾನು ಕುರಿತು ತಿಳಿದು ಬಂದಿದೆ.

ವಶಪಡಿಸಿಕೊಂಡ ಮರಳಿನ ಮಾರುಕಟ್ಟೆ ಮೌಲ್ಯ ಸುಮಾರು ₹ 55ಲಕ್ಷ  ಎಂದು ಲೋಕೋಪಯೋಗಿ ಬಂದರು ಹಾಗೂ ಜಲಸಾರಿಗೆ ಇಲಾಖೆ ಎಇಇ ಕೆ. ನೀಲಗಿರಿಯಪ್ಪ ತಿಳಿಸಿದರು. ದಾಳಿಯಲ್ಲಿ ತಹಶೀಲ್ದಾರ್‌ ನಜ್ಮಾ, ಡಿವೈಎಸ್ಪಿ ನೇಮಗೌಡ, ಸಿಪಿಐ ಜಯಣ್ಣ ನ್ಯಾಮಗೌಡ, ಪಿಎಸ್‌ಐ ದೇವರಾಜ್‌, ಕಂದಾಯ, ಪೊಲೀಸ್‌ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು. ಇಲ್ಲಿನ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.