ADVERTISEMENT

ಇಂದಿನಿಂದ ರೈತರ ಹೋರಾಟ ತೀವ್ರ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2012, 5:05 IST
Last Updated 22 ಆಗಸ್ಟ್ 2012, 5:05 IST
ಇಂದಿನಿಂದ ರೈತರ ಹೋರಾಟ ತೀವ್ರ
ಇಂದಿನಿಂದ ರೈತರ ಹೋರಾಟ ತೀವ್ರ   

ದಾವಣಗೆರೆ: ಹೊರವಲಯದ `ಕರೂರು ಕೈಗಾರಿಕಾ  ಪ್ರದೇಶ~ದಲ್ಲಿ ಬಳಕೆ ಮಾಡದೇ ಇರುವ ಜಮೀನನ್ನು ಮರಳಿ ರೈತರಿಗೆ ನೀಡಬೇಕು ಎಂದು ಒತ್ತಾಯಿಸಿ ಶುಕ್ರವಾರ ರಾಜ್ಯ ರೈತ ಸಂಘ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಸದಸ್ಯರು ಹಾಗೂ ರೈತರು ವಿವಾದಿತ ಸ್ಥಳದಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಮಂಗಳವಾರ ಎಂಟನೇ ದಿನಕ್ಕೆ ಕಾಲಿಟ್ಟಿದ್ದು, ಹೋರಾಟ ತೀವ್ರಗೊಳಿಸಲು ನಿರ್ಧರಿಸಲಾಗಿದೆ.

ಎಂಟು ದಿನಗಳಿಂದ ನಿರಂತರವಾಗಿ ಶಾಂತಿಯುತ ಹೋರಾಟ ಮಾಡುತ್ತಿದ್ದೇವೆ. ಆದರೂ ಸರ್ಕಾರದ ಗಮನಕ್ಕೆ ಹೋಗಿಲ್ಲ. ಸರ್ಕಾರ ರೈತರ ನೋವನ್ನು ಅರ್ಥ ಮಾಡಿಕೊಂಡಿಲ್ಲ ಎಂಬುದು ಇದರಿಂದ ಗೊತ್ತಾಗುತ್ತದೆ ಎಂದು ಕಬ್ಬು ಬೆಳಗಾರರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ತೇಜಸ್ವಿ ವಿ. ಪಟೇಲ್ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಅವರು, ಸ್ಥಳಕ್ಕೆ ಆಗಮಿಸಿದ್ದು ವೈಯಕ್ತಿಕ ಆಸಕ್ತಿಯಿಂದಲೇ ಹೊರತು, ಸರ್ಕಾರದ ಸೂಚನೆಯಿಂದಲ್ಲ.

ಅಪಾರ ಸಂಖ್ಯೆಯಲ್ಲಿರುವ ನಿವೇಶನದಾರರು ಕಡಿಮೆ ಸಂಖ್ಯೆಯಲ್ಲಿ ಧರಣಿಯಲ್ಲಿ ಪಾಲ್ಗೊಳ್ಳುತ್ತಿರುವುದು ಹೋರಾಟ ನಿರೀಕ್ಷಿತಮಟ್ಟದಲ್ಲಿ ಸಾಗದಿರಲು ಕಾರಣವಾಗಿದೆ. ಹೀಗಾಗಿ, ಆ. 22ರಿಂದ ಹೋರಾಟ ತೀವ್ರಗೊಳಿಸಲಾಗುವುದು ಎಂದು ಅವರು ತಿಳಿಸಿದರು.

ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಪೂಜಾರ್ ಆಂಜಿನಪ್ಪ ಹಾಗೂ ರೈತರು ಇದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.