ADVERTISEMENT

ಕಣಿವೆಬಿಳಚಿಗೆ ಗ್ರಾ.ಪಂ.ಗೆ ನಿರ್ಮಲ ಗ್ರಾಮ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 1 ಮೇ 2011, 9:55 IST
Last Updated 1 ಮೇ 2011, 9:55 IST

ಬಸವಾಪಟ್ಟಣ: ಸಮೀಪದ ಕಣಿವೆಬಿಳಚಿ ಗ್ರಾಮ ಪಂಚಾಯ್ತಿಯು 2010-11ನೇ ಸಾಲಿನ ನಿರ್ಮಲ ಗ್ರಾಮ ಪುರಸ್ಕಾರವನ್ನು ಪಡೆದಿದೆ.

ಗ್ರಾಮದ ಜನತೆಗೆ ಸ್ವಚ್ಛತೆಯ ಅರಿವು ಮತ್ತು ಪರಿಸರ ಪ್ರಜ್ಞೆಯ ಬಗ್ಗೆ ಸಾಕಷ್ಟು ತಿಳಿವಳಿಕೆ ನೀಡಲಾಗಿದ್ದು, ಈ ಪುರಸ್ಕಾರವನ್ನು ಪಡೆಯಲು ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಗ್ರಾ.ಪಂ. ಅಧ್ಯಕ್ಷ ಜಿ.ಎನ್. ಅನಿಲ್‌ಕುಮಾರ್, ಇದಕ್ಕೆ ಸಹಕರಿಸಿದಕ್ಕಾಗಿ ಎಲ್ಲಾ ಗ್ರಾಮಸ್ಥರಿಗೂ ಅಭಿನಂದನೆ ಸಲ್ಲಿಸಿದ್ದಾರೆ.

ಈ  ಬಗ್ಗೆ ವಿವರಣೆ ನೀಡಿದ ಅವರು, ನಮ್ಮ ಗ್ರಾಮ ಪಂಚಾಯ್ತಿಯಲ್ಲಿ ಎರಡು ಗ್ರಾಮಗಳಿದ್ದು, ಶೇಕಡಾ 70ರಷ್ಟು ಹಿಂದುಳಿದ ಮತ್ತು ಅನುಸೂಚಿತ ಜಾತಿಯ ಜನರಿದ್ದಾರೆ. ಗ್ರಾಮ ನೈರ್ಮಲ್ಯ ಯೋಜನೆ ಅಡಿಯಲ್ಲಿ ಶೇಕಡ 90ರಷ್ಟು ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಬಾಕ್ಸ್ ಚರಂಡಿಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಪರಿಶಿಷ್ಟರ ಕಾಲೊನಿಗಳಲ್ಲಿ ಶೇಕಡಾ 80ರಷ್ಟು ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಅಲ್ಲದೇ, ಶಾಲೆಗಳಲ್ಲಿ ಶೌಚಾಲಯಗಳ ದುರಸ್ತಿ, ಕಾಂಪೌಂಡ್ ಮತ್ತು ಆಟದ ಮೈದಾನಗಳ ಅಭಿವೃದ್ಧಿ ಕಾಮಗಾರಿಗಳನ್ನು ಆರಂಭಿಸಲಾಗಿದೆ ಎಂದರು. ಸಮೀಪದ ಕಣಿವೆಬಿಳಚಿ ಗ್ರಾಮ ಪಂಚಾಯ್ತಿಯು 2010-11ನೇ ಸಾಲಿನ ನಿರ್ಮಲ ಗ್ರಾಮ ಪುರಸ್ಕಾರವನ್ನು ಪಡೆದಿದೆ.

ಗ್ರಾಮದ ಜನತೆಗೆ ಸ್ವಚ್ಛತೆಯ ಅರಿವು ಮತ್ತು ಪರಿಸರ ಪ್ರಜ್ಞೆಯ ಬಗ್ಗೆ ಸಾಕಷ್ಟು ತಿಳಿವಳಿಕೆ ನೀಡಲಾಗಿದ್ದು, ಈ ಪುರಸ್ಕಾರವನ್ನು ಪಡೆಯಲು ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಗ್ರಾ.ಪಂ. ಅಧ್ಯಕ್ಷ ಜಿ.ಎನ್. ಅನಿಲ್‌ಕುಮಾರ್, ಇದಕ್ಕೆ ಸಹಕರಿಸಿದಕ್ಕಾಗಿ ಎಲ್ಲಾ ಗ್ರಾಮಸ್ಥರಿಗೂ ಅಭಿನಂದನೆ ಸಲ್ಲಿಸಿದ್ದಾರೆ.

ಈ  ಬಗ್ಗೆ ವಿವರಣೆ ನೀಡಿದ ಅವರು, ನಮ್ಮ ಗ್ರಾಮ ಪಂಚಾಯ್ತಿಯಲ್ಲಿ ಎರಡು ಗ್ರಾಮಗಳಿದ್ದು, ಶೇಕಡಾ 70ರಷ್ಟು ಹಿಂದುಳಿದ ಮತ್ತು ಅನುಸೂಚಿತ ಜಾತಿಯ ಜನರಿದ್ದಾರೆ. ಗ್ರಾಮ ನೈರ್ಮಲ್ಯ ಯೋಜನೆ ಅಡಿಯಲ್ಲಿ ಶೇಕಡ 90ರಷ್ಟು ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಬಾಕ್ಸ್ ಚರಂಡಿಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಪರಿಶಿಷ್ಟರ ಕಾಲೊನಿಗಳಲ್ಲಿ ಶೇಕಡಾ 80ರಷ್ಟು ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಅಲ್ಲದೇ, ಶಾಲೆಗಳಲ್ಲಿ ಶೌಚಾಲಯಗಳ ದುರಸ್ತಿ, ಕಾಂಪೌಂಡ್ ಮತ್ತು ಆಟದ ಮೈದಾನಗಳ ಅಭಿವೃದ್ಧಿ ಕಾಮಗಾರಿಗಳನ್ನು ಆರಂಭಿಸಲಾಗಿದೆ ಎಂದರು.
 
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.