ADVERTISEMENT

ಕೋ-ಆಪರೇಟೀವ್ ಬ್ಯಾಂಕ್ ಚುನಾವಣೆ ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 6:35 IST
Last Updated 19 ಮಾರ್ಚ್ 2012, 6:35 IST

ಹರಿಹರ: ನಗರದ ಹರಿಹರೇಶ್ವರ ಅರ್ಬನ್ ಬ್ಯಾಂಕ್ ಕೋ-ಆಪರೇಟೀವ್ ಬ್ಯಾಂಕ್‌ನ ನಿರ್ದೇಶಕ ಮಂಡಳಿಯ ಚುನಾವಣೆ ಭಾನುವಾರ ನಡೆಯಿತು.

ಬ್ಯಾಂಕ್‌ಗೆ ಒಟ್ಟು 2,985 ಅರ್ಹ ಮತದಾರ ಸದಸ್ಯರಿದ್ದಾರೆ. ನಿರ್ದೇಶಕ ಮಂಡಳಿಯ ಸಾಮಾನ್ಯ ಕ್ಷೇತ್ರ 7, ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡ. ಮೀಸಲು ಕ್ಷೇತ್ರ 1, ಮಹಿಳಾ ಮೀಸಲು ಕ್ಷೇತ್ರ 1, ಬ್ಯಾಂಕಿಂಗ್ ವ್ಯವಹಾರದಲ್ಲಿ ಅನುಭವವುಳ್ಳವರ ಕ್ಷೇತ್ರ 1 ಒಟ್ಟು 10 ಸ್ಥಾನಗಳಿಗೆ 32 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಚುನಾವಣೆ ನಡೆಯಿತು. ಚುನಾವಣೆ ನಂತರ ಮತ ಎಣಿಕೆ ಕಾರ್ಯ ನಡೆಯಿತು. ಚುನಾವಣೆಯಲ್ಲಿ 1,240 ಸದಸ್ಯರು ಮತ ಚಲಾಯಿಸಿದರು.

ADVERTISEMENT

ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡ. ಮೀಸಲು ಕ್ಷೇತ್ರಕ್ಕೆ ಬಿ. ನಿಂಗಪ್ಪ (593), ಮಹಿಳಾ ಮೀಸಲು ಕ್ಷೇತ್ರಕ್ಕೆ ಬಿ.ಎಚ್. ರಾಧಾ (689), ಬ್ಯಾಂಕಿಂಗ್ ವ್ಯವಹಾರದಲ್ಲಿ ಅನುಭವವುಳ್ಳವರ ಕ್ಷೇತ್ರಕ್ಕೆ ಜಿ. ವೀರಯ್ಯ (702), ಸಾಮಾನ್ಯ ಕ್ಷೇತ್ರಕ್ಕೆ ಬಿ.ಕೆ. ಅನ್ವರ್‌ಪಾಷಾ (659), ನಾರಾಯಣಸಾ ಕಾಟ್ವೆ (640), ಎಚ್.ಎಂ. ಹಾಲಯ್ಯ (636), ಅಣ್ಣಪ್ಪ (612), ವಾಸುದೇವ ಹೋವಳೆ (575), ವಿ. ಪರಶುರಾಮ (533), ಜಿ.ಕೆ. ಮಲ್ಲಿಕಾರ್ಜುನ (531) ವಿಜಯಶಾಲಿಗಳಾಗ್ದ್ದಿದಾರೆ ಎಂದು ಚುನಾವಣಾಧಿಕಾರಿ ಎಚ್.ಎಸ್. ಸತೀಶ್‌ಕುಮಾರ್ ಘೋಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.