ADVERTISEMENT

ಗ್ರಾಸಿಂ: ಸ್ಥಳೀಯರಿಗೆ ಉದ್ಯೋಗಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಜೂನ್ 2012, 6:00 IST
Last Updated 11 ಜೂನ್ 2012, 6:00 IST

ಹರಿಹರ: ನಗರದ ಸಮೀಪದಲ್ಲಿರುವ ಕುಮಾರಪಟ್ಟಣದ ಗ್ರಾಸಿಂ ಕಂಪೆನಿಯಲ್ಲಿ `ಸ್ಥಳೀಯ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡುವಂತೆ ಆಗ್ರಹಿಸಿ~ ರೈತ ಸಂಘ ಮತ್ತು ಹಸಿರು ಸೇನೆ, ತುಂಗಭದ್ರ ಪರಿಸರ ಮಾಲಿನ್ಯ ನಿಯಂತ್ರಣ ಹಾಗೂ ಜನಜಾಗೃತಿ ಹೋರಾಟ ಸಮಿತಿ ಕಾರ್ಯಕರ್ತರು ಶನಿವಾರ ಕಂಪೆನಿ ಎದುರು ಪ್ರತಿಭಟನೆ ನಡೆಸಿದರು.

ರೈತರ ಸಂಘ ಮತ್ತು ಹಸಿರು ಸೇನೆ ರಾಜ್ಯ ಘಟಕದ ಮುಖಂಡ ರವೀಂದ್ರ ಎಫ್. ಪಾಟೀಲ್ ಮಾತನಾಡಿ, ಕಂಪೆನಿ ಸ್ಥಳೀಯ ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶದಿಂದ ವಂಚಿತರನ್ನಾಗಿ ಮಾಡಿದೆ. ಸುತ್ತಲಿನ ಗ್ರಾಮಗಳಾದ ನಲವಾಗಲು, ನದಿಹರಳಹಳ್ಳಿ, ಕುಮಾರಪಟ್ಟಣ, ಐರಣಿ, ಖಂಡೇರಾಯನಹಳ್ಳಿ, ಕವಲೆತ್ತು, ಹೊಸಪೇಟೆ, ಹಿರೇಬಿದರಿ, ಮಾಕನೂರು, ಹುಲಿಕಟ್ಟೆ ಒಡೆರಾಯನಹಳ್ಳಿಯಲ್ಲಿ ಐಟಿಐ, ಡಿಪ್ಲಮೋ ಹಾಗೂ ಎಂಜಿನಿಯರಿಂಗ್ ಕೋರ್ಸ್ ಪೂರ್ಣಗೊಳಿಸಿದ ಹಲವಾರು ಯುವಕರಿದ್ದಾರೆ. ಅವರಿಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.

ಕಂಪೆನಿಯ ಗ್ರಾಮೀಣಾಭಿವೃದ್ಧಿ ವಿಭಾಗದ ವ್ಯವಸ್ಥಾಪಕ ಎಸ್.ಜೆ. ನಾರಾಯಣರಾವ್ ಅವರಿಗೆ ಮನವಿ ಸಲ್ಲಿಸಿದರು.

ADVERTISEMENT

ಪ್ರತಿಭಟನೆಯಲ್ಲಿ ಚಂದ್ರಣ್ಣ ಹ. ಬೇಡರ, ಶಿವಪ್ಪ ಬ. ಬುಳ್ಳಮ್ಮನವರ, ಕರಿಬಸಯ್ಯ ಪಿ. ಶಂಕರಿಮಠ, ಚನ್ನಬಸಪ್ಪ, ಶಿವಲಿಂಗಪ್ಪನವರ, ಬಿ.ಕೆ. ರಾಜನಹಳ್ಳಿ, ಬಸವರಾಜ್, ಶಿವಪುತ್ರಪ್ಪ ಮಲ್ಲಾಡದ, ಡಾ.ಜಗದೀಶಯ್ಯ, ಶಿವಪ್ಪ ಜಾನಪ್ಪನವರ, ಚೌಡಪ್ಪ ಹರಿಜನ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.