ADVERTISEMENT

ಚನ್ನಗಿರಿಗೆ ಸೇನಾಪಡೆ ತಂಡ ಭೇಟಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2011, 7:15 IST
Last Updated 18 ಜನವರಿ 2011, 7:15 IST

ಚನ್ನಗಿರಿ: ಪುಣೆಯ ಎನ್‌ಡಿಆರ್‌ಎಫ್ ಸೇನಾ ಪಡೆಯ ತಂಡ ಸೋಮವಾರ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಪ್ರವಾಹ ಬಂದಾಗ ಯಾವ ರೀತಿ ರಕ್ಷಣೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಸೋಮವಾರ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿತೆ ಮೂಲಕ ವಿವರಿಸಿದರು.

ಪ್ರವಾಹ ಬಂದಾಗ, ದೊಡ್ಡ ಕಟ್ಟಡಗಳು ಕುಸಿದಾಗ, ಭೂಕಂಪ ಸಂಭವಿಸಿದಾಗ... -ಹೀಗೆ ಪ್ರಕೃತಿ ವಿಕೋಪಗಳು ಉಂಟಾದಾಗ ಯಾವ ರೀತಿ ಗಾಬರಿ ಬೀಳದೇ ಜೀವ ರಕ್ಷಣೆ ಮಾಡಿಕೊಳ್ಳುವುದರ ಬಗ್ಗೆ ಸೇನಾಪಡೆಯ ಪಿಎಸ್‌ಐ ಶಾದೀಶ್, ಸುನಿಲ್‌ಕುಮಾರ್, ರಾಕೇಶ್ ಕುಮಾರ್ ಮತ್ತು ಅವರ ತಂಡ ವಿದ್ಯಾರ್ಥಿಗಳಿಗೆ ಪ್ರದರ್ಶನ ಮೂಲಕ ವಿವರಿಸಿತು.

ತಮ್ಮೊಂದಿಗೆ ತಂದಿದ್ದ ರಕ್ಷಣಾ ಸಾಮಗ್ರಿಗಳನ್ನು ವಿದ್ಯಾರ್ಥಿಗಳಿಗೆ ತೋರಿಸಿ, ಅವುಗಳನ್ನು ಯಾವ ರೀತಿ ಉಪಯೋಗ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಸಿಪಿಐ ರಮೇಶ್‌ಕುಮಾರ್, ಪ್ರಾಂಶುಪಾಲ ಶಿವಮೂರ್ತಿ ನಾಯ್ಕ, ಉಪನ್ಯಾಸಕರಾದ ಜಿಯಾವುಲ್ಲಾ, ರಾಮರೆಡ್ಡಿ, ಮಹೇಶ್ವರಪ್ಪ, ಹಿರಿಯ ಕಂದಾಯ ನಿರೀಕ್ಷಕ ಮಲ್ಲೇಶಪ್ಪ ಮುಂತಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.