ADVERTISEMENT

ಜಿಲ್ಲಾ ಉತ್ಸವಕ್ಕೆ ಭರದ ಸಿದ್ಧತೆ...

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 9:25 IST
Last Updated 10 ಫೆಬ್ರುವರಿ 2012, 9:25 IST

ದಾವಣಗೆರೆ: ಜಿಲ್ಲಾ ಉತ್ಸವ `ದಾವಣಗೆರೆ ಹಬ್ಬ~ ಕಾರ್ಯಕ್ರಮಕ್ಕೆ ಭರದ ಸಿದ್ಧತೆಗಳು ಮುಂದುವರಿದಿವೆ.
ಫೆ.11 ರಿಂದ 13 ರವರೆಗೆ ವಾಹ್... ದಾವಣಗೆರೆ ನಮ್ ಜಿಲ್ಲೆ ಆಟ-ಊಟ-ನೋಟದ ಹಬ್ಬಕ್ಕೆ ನಗರದ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಅಂತಿಮ ತಯಾರಿಗಳು ನಡೆದಿವೆ.

ಉದ್ಘಾಟನೆ: ಫೆ. 11ರ ಸಂಜೆ 6.30ಕ್ಕೆ ತುಂಗಭದ್ರಾ ಮಹಾವೇದಿಕೆಯಲ್ಲಿ ಸಚಿವ ಗೋವಿಂದ ಎಂ. ಕಾರಜೋಳ ಅವರು ಹಬ್ಬವನ್ನು ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರವೀಂದ್ರನಾಥ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸತ್ ಸದಸ್ಯ ಜಿ.ಎಂ. ಸಿದ್ದೇಶ್ವರ ಅವರು ತೆನೆತೇರು ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಕಾರ್ಯಕ್ರಮಗಳ ವಿವರ ಹೀಗಿವೆ.

ಸಾಂಸ್ಕೃತಿಕ ಕಾರ್ಯಕ್ರಮ: 1ರಂದು ಸಂಜೆ 5.45ಕ್ಕೆ ನಗರದ ವಿದ್ವಾನ್ ಎನ್. ಮಂಜುನಾಥ ಮತ್ತು ವೃಂದದಿಂದ ಮಂಗಳವಾದ್ಯ, ಬಸವ ಭಜನಾ ಕೇಂದ್ರದಿಂದ ನಂದಿಕೋಲು ಕುಣಿತ, ಚನ್ನಗಿರಿ ತಾಲ್ಲೂಕಿನ ಹಿರೇಮಳಲಿಯ

ಬಸವೇಶ್ವರ ವೀರಗಾಸೆ ಯುವಕ ಸಂಘದ ವತಿಯಿಂದ ವೀರಗಾಸೆ, ಹರಿಹರದ ಕಸಬಾ ದುರ್ಗಾಂಬಿಕಾ ಡೊಳ್ಳಿನ ಯುವಕ ಸಂಘದಿಂದ ಡೊಳ್ಳು ಕುಣಿತ ಹಾಗೂ ರಾತ್ರಿ 7.30 ರಿಂದ ಮಣಿಪುರದ ಧೋಲ್‌ಚೋಲಂ, ಅಸ್ಸಾಂನ ಬಿಹು ನೃತ್ಯ, ಪಂಜಾಬ್‌ನ ಭಾಂಗ್ಡಾ ನೃತ್ಯ, ಬೆಂಗಳೂರಿನ ಶುಭಾ ಧನಂಜಯ ಮತ್ತು ತಂಡದಿಂದ ನೃತ್ಯ ಸಂಗಮ ಹಾಗೂ ಖ್ಯಾತ ಹಿನ್ನೆಲೆ ಗಾಯಕರು ಹಾಗೂ ಸಂಗೀತ

ನಿರ್ದೇಶಕರಾದ ಗುರುಕಿರಣ್ ಮತ್ತು ವೃಂದದಿಂದ ಚಲನಚಿತ್ರ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.
12ರ ಸಂಜೆ 6ರಿಂದ ಜಿಲ್ಲೆಯ 200 ಕಲಾವಿದರಿಂದ

ಸಮೂಹ ಗಾನ, ಪ್ರಹ್ಲಾದಭಟ್, ಮಾನಸಾ, ಮೈತ್ರಿ ಹಾಗೂ ಮುರುಗೇಶ್ ಬಾಬುರವರಿಂದ `ದಾವಣಗೆರೆ ಧ್ವನಿ~, ಯಶಾ ದಿನೇಶ್ ಹಾಗೂ ವಿಜಯಲಕ್ಷ್ಮೀ ಅವರಿಂದ ಸಂಗೀತ ವೈವಿಧ್ಯ, ಬೆಂಗಳೂರಿನ ನಾಟ್ಯೇಶ್ವರ ನೃತ್ಯ ಶಾಲೆಯ ಕೆ.ಪಿ. ಸತೀಶ್‌ಬಾಬುರವರ ನಿರ್ದೇಶನದ ಗೊಂಬೆ ವೈಭವ, ಭಾರತೀಯ ಜನಪದ ಐಸಿರಿ, ರಾತ್ರಿ 7.30 ರಿಂದ ಪಂಜಾಬ್‌ನ ಪಂಜಾಬಿ ನೃತ್ಯ, ಅಸ್ಸಾಂನ ಬಿಹು ನೃತ್ಯ, ಮಣಿಪುರದ ಮಣಿಪುರಿ ನೃತ್ಯ, ಬೆಂಗಳೂರಿನ ವೈಜಯಂತಿ ಕಾಶಿ ಮತ್ತು ತಂಡದಿಂದ ನಮನ (ನೃತ್ಯ ರೂಪಕ), ಶಿವಮೊಗ್ಗ ಸುಬ್ಬಣ್ಣ ಮತ್ತು ನರಸಿಂಹನಾಯಕ್, ಕಿಕ್ಕೇರಿ ಕೃಷ್ಣಮೂರ್ತಿ, ವಿಜಯ ಹಾವನೂರು, ರಾಮೇಶ್ವರಪ್ಪ, ಕಸ್ತೂರಿ ಶಂಕರ್, ಮಾಲತಿ ಶರ್ಮ, ಇಂದು ವಿಶ್ವನಾಥ್, ಪ್ರೇಮಲತಾ ದಿವಾಕರ್, ಕೆ.ಎಸ್. ಸುರೇಖಾ, ವೃಂದಾ ಎಸ್. ರಾವ್, ವೈಷ್ಣವರಾವ್, ಚಂದ್ರಿಕಾ ಬದ್ರಿನಾಥ್,  ಭಾಗ್ಯಾ ವಿ.ರಾವ್, ರಶ್ಮಿ ಮಂಜುನಾಥ್, ಎಂ.ಎಸ್. ಸುಧೀರ್  ಅವರಿಂದ ಗೀತ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಫೆ.13ರಂದು ಸಂಜೆ 6ಕ್ಕೆ 200 ಕಲಾವಿದರಿಂದ ಸಮೂಹ ಗಾಯನ, ಹೆಗ್ಗೆರೆ ರಂಗಪ್ಪ ಮತ್ತು ವೃಂದದಿಂದ ಜನಪದ ಸಂಗೀತ, ಅಜಯ್ ಕಬ್ಬಳ್ಳಿ ಅವರ ವಚನ ಸಂಗೀತ, ನಗರದ ಚಿರಂತನರವರಿಂದ ನೃತ್ಯ ವೈವಿಧ್ಯ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.