ADVERTISEMENT

ಜೆ.ಸಿ.ಪಟೇಲ್‌ ಬಳಿ ನಗದು ಇಲ್ಲ!

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 5:29 IST
Last Updated 22 ಮಾರ್ಚ್ 2014, 5:29 IST

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಸರ್ವ ಜನತಾ ಪಕ್ಷದಿಂದ ಕಣಕ್ಕೆ ಇಳಿದಿರುವ ಜೆ.ಸಿ.ಪಟೇಲ್‌ ತಮ್ಮ ಆಸ್ತಿ ವಿವರ ಘೋಷಣೆ ಮಾಡಿಕೊಂಡಿದ್ದು, ಅವರ ಬಳಿ ಯಾವುದೇ ನಗದು ಇಲ್ಲ. ಬ್ಯಾಂಕ್‌ನಲ್ಲಿ ನಿಗದಿತ ಠೇವಣಿ ಬಿಟ್ಟರೆ ಹೆಚ್ಚಿನ ಹಣವೂ ಇಲ್ಲ!

ಕೆನರಾ ಬ್ಯಾಂಕ್‌ನ ಅವರ ಖಾತೆಯಲ್ಲಿ ₨ 500 ಹಾಗೂ ಪತ್ನಿ ಖಾತೆಯಲ್ಲಿ ಕಾರ್ಪೋರೇಷನ್‌ ಬ್ಯಾಂಕ್‌– ₨ 500, ಕರ್ನಾಟಕ ಬ್ಯಾಂಕ್‌– ₨ 500 ಮೂಲ ಠೇವಣಿ ಇದೆ. ಅವರ ಬಳಿ ಎರಡು ಬೈಕ್‌ ಹಾಗೂ 1 ಕಾರು ಇದೆ. ಪಟೇಲ್‌ ಬಳಿ 30 ಗ್ರಾಂ ಚಿನ್ನಾಭರಣ, ಪತ್ನಿ ಹೆಸರಲ್ಲಿ 90 ಗ್ರಾಂ ಚಿನ್ನಾಭರಣ ಇದೆ ಎಂದು ಉಲ್ಲೇಖಿಸಿದ್ದಾರೆ.

ಅವಿಭಕ್ತ ಕುಟುಂಬದ ಆಸ್ತಿ ಒಟ್ಟು 21 ಎಕರೆ ಇದೆ ಎಂದು ಉಲ್ಲೇಖಿಸಿದ್ದಾರೆ. ಇವರ ಮೇಲೆ ಯಾವುದೇ ಕ್ರಿಮಿನಲ್‌ ಮೊಕದ್ದಮೆ ದಾಖಲಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.