ADVERTISEMENT

ತಾರತಮ್ಯ ಧೋರಣೆ: ದಿನಗೂಲಿ ನೌಕರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 8:34 IST
Last Updated 17 ಸೆಪ್ಟೆಂಬರ್ 2013, 8:34 IST

ಜಗಳೂರು: ಸೇವೆ ಕಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅರಣ್ಯ ಇಲಾಖೆಯ ದಿನಗೂಲಿ ನೌಕರರು ಪಟ್ಟಣದ ಅರಣ್ಯ ಇಲಾಖೆ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

25–30 ವರ್ಷಗಳಿಂದ ಇಲಾಖೆಯಲಿ್ಲಿ ಸೇವೆ ಸಲ್ಲಿಸುತಿ್ತರುವ 40ಕ್ಕೂ ಹೆಚು್ಚ ನೌಕರರನ್ನು ಇದುವರೆಗೂ ಕಾಯಂಗೊಳಿಸಿಲ್ಲ. ದಿನಗೂಲಿ ನೌಕರರಾದ ಅಂಜಿನಪ್ಪ ಹಾಗೂ ಹನುಮಂತಪ್ಪ ಅವರ ಹೆಸರುಗಳನು್ನ  ಸಕಾರಣವಿಲ್ಲದೆ  ಇಲಾಖೆಯ ಅಧಿಕಾರಿಗಳು
ಸೇವಾ ದಾಖಲೆಯಿಂದ

ಕೈಬಿಟಿ್ಟದಾ್ದರೆ. ಇಲಾಖೆಯಲಿ್ಲಿ ಶ್ರಮವಹಿಸಿ ದಶಕಗಟ್ಟಲೆ ಸೇವೆ ಸಲ್ಲಿಸಿರುವ ನೌಕರರನು್ನ ಎಂ.ಆರ್‌. ಪಟಿ್ಟಗೆ ಸೇರ್ಪಡೆಗೊಳಿಸುವಂತೆ ಹಲವು ಬಾರಿ ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ದಿನಗೂಲಿ ನೌಕರರಿಗೆ ` 1 ಸಾವಿರ ವೇತನ ಹೆಚ್ಚಳ ಮಾಡಿ ಸರ್ಕಾರ ಆದೇಶಿಸಿದ್ದರೂ   ತಾಲ್ಲೂಕಿನ 43 ನೌಕರರ ಪೈಕಿ 30 ನೌಕರರಿಗೆ ಈ ಸೌಲಭ್ಯ ನೀಡದೇ ವಂಚಿಸಲಾಗಿದೆ. ಅಧಿಕಾರಿಗಳು ವೈಯಕಿ್ತಕ ಕಾರಣಗಳಿಗಾಗಿ ದಿನಗೂಲಿ ನೌಕರರಿಗೆ ತಾರತಮ್ಯ ಮಾಡುತಿ್ತದು್ದ  6 ತಿಂಗಳಿನಿಂದ ವೇತನ ನೀಡದೆ ಸತಾಯಿಸಲಾಗುತ್ತಿದೆ. ಈ ಬಗ್ಗೆ ವಿಚಾರಿಸಿದರೆ ಅಧಿಕಾರಿಗಳು ಹಾರಿಕೆಯ ಉತ್ತರ ನೀಡುತ್ತಾರೆ  ಎಂದು ನೌಕರರು ಆರೋಪಿಸಿದರು.

ಜನಪ್ರತಿನಿಧಿಗಳು ಮತ್ತು ಮೇಲಾಧಿಕಾರಿಗಳು ಕೂಡಲೇ ತುರ್ತು ಗಮನಹರಿಸಿ ನೌಕರರ ಸಮಸ್ಯೆ ಪರಿಹಾರಕೆ್ಕ ಅಗತ್ಯ ಕ್ರಮ ಕೈಗೊಳ್ಳಬೇಕು  ಎಂದು ಆಗ್ರಹಿಸಿದರು.

ಕರ್ನಾಟಕ ರಾಜ್ಯ ಅರಣ್ಯ ದಿನಗೂಲಿ ನೌಕರರ ಸಂಘದ ಜಿಲ್ಲಾ ಘಟಕದ  ಅಧ್ಯಕ್ಷ ಕೆ.ವಿ.ಬಸವರಾಜ್‌, ಉಪಾಧ್ಯಕ್ಷ ರಾಜಪ್ಪ, ಅಂಜಿನಪ್ಪ, ಕೆ.ವಿ.ಮಹೇಶ್‌, ರಾಜಪ್ಪ, ಗುರಪ್ಪ, ಬಸವಲಿಂಗಪ್ಪ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.