ADVERTISEMENT

ನಗರದಲ್ಲಿ ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2018, 7:03 IST
Last Updated 16 ಮಾರ್ಚ್ 2018, 7:03 IST
ದಾವಣಗೆರೆಯಲ್ಲಿ ಗುರುವಾರ ರಾತ್ರಿ ಸುರಿದ ಮಳೆಯಲ್ಲಿಯೇ ವಾಹನ ಸವಾರರು ತೆರಳುತ್ತಿದ್ದ ದೃಶ್ಯ ಶಾಮನೂರು ರಸ್ತೆಯಲ್ಲಿ ಕಂಡುಬಂತು.
ದಾವಣಗೆರೆಯಲ್ಲಿ ಗುರುವಾರ ರಾತ್ರಿ ಸುರಿದ ಮಳೆಯಲ್ಲಿಯೇ ವಾಹನ ಸವಾರರು ತೆರಳುತ್ತಿದ್ದ ದೃಶ್ಯ ಶಾಮನೂರು ರಸ್ತೆಯಲ್ಲಿ ಕಂಡುಬಂತು.   

ದಾವಣಗೆರೆ: ನಗರದಲ್ಲಿ ಗುರುವಾರ ರಾತ್ರಿ ತುಸು ಬಿರುಸಿನ ಮಳೆ ಸುರಿಯಿತು. ಇದರಿಂದಾಗಿ ಬಿಸಿಲಿನ ತಾಪದಿಂದ ಬಸವಳಿದಿದ್ದ ಭೂಮಿಗೆ ತುಸು ತಂಪೆರೆದಂತಾಯಿತು.

ನಗರದಲ್ಲಿ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಸಂಜೆಯ ವೇಳೆ ತುಂತುರು ಹನಿಗಳ ಸಿಂಚನವಾಯಿತು. ರಾತ್ರಿ 10ರ ನಂತರ ತುಸು ಜೋರಾಯಿತು.

ಹರಿಹರ ವರದಿ: ನಗರದ ಸುತ್ತಮುತ್ತಲಿನ ಪ್ರದೇಶದಲ್ಲಿ ಬುಧವಾರ ತಡರಾತ್ರಿ ಭಾರಿ ಗಾಳಿಯಿಂದ ಕೂಡಿದ ತುಂತುರು ಮಳೆಯಾಗಿದೆ. ರಾತ್ರಿ ಬೀಸಿದ ಭಾರಿ ಗಾಳಿಗೆ ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್‍ ವ್ಯತಯ ಉಂಟಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.