ADVERTISEMENT

ನಾಲೆ ದುರಸ್ತಿಗೆ ಆಗ್ರಹಿಸಿ ಧರಣಿಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2017, 8:31 IST
Last Updated 4 ಡಿಸೆಂಬರ್ 2017, 8:31 IST

ಮಲೇಬೆನ್ನೂರು: ಭದ್ರಾನಾಲೆಯ ನೀರಿನ ಹರಿವಿಗೆ ಅಡ್ಡಿಯಾಗಿರುವ ಹೂಳು ಎತ್ತಿಸದಿದ್ದಲ್ಲಿ ಡಿ. 5ರಿಂದ ಕರ್ನಾಟಕ ನೀರಾವರಿ ನಿಗಮದ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ವಾಸನದ ಓಂಕಾರಪ್ಪ ಶನಿವಾರ ಹೇಳಿದರು.

ಬೇಸಿಗೆ ಹಂಗಾಮಿಗೆ ನೀರು ಬಿಡುಗಡೆ ಮಾಡುವ ದಿನಾಂಕ ಪ್ರಕಟವಾಗಿದ್ದು, ನಾಲೆ ಸ್ಥಿತಿಗತಿ ಎಂಜಿನಿಯರ್‌ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ. ಆದರೆ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಸ್ಥಳೀಯ ಇಇ, ಎಇಇಗಳು, ಕಾಡಾ ಅಧ್ಯಕ್ಷರು, ಎಸ್ಇ, ಸಿಇ ಕಾಮಗಾರಿ ಮಾಡಿಸಲು ಅನುದಾನ ಇಲ್ಲ ಎನ್ನುತ್ತಾರೆ. ನಾಲೆ ಸಂಪೂರ್ಣ ಹಾಳಾಗಿ ನೀರು ಹರಿಯದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ನಾಲೆ ದುರಸ್ತಿಗೆ ಮನಸ್ಸು ಮಾಡಿ ವಿಶೇಷ ಅನುದಾನ ಬಿಡುಗಡೆ ಮಾಡಿಲ್ಲ ಎಂದು ರೈತ ಸಂಘದ ಪ್ರಭೂಗೌಡ, ಫಾಲಾಕ್ಷಪ್ಪ ಬೇಸರ ವ್ಯಕ್ತಪಡಿಸಿದರು. ಪ್ರತಿ ಬಾರಿ ಬೇಸಿಗೆ ವೇಳೆ ಕೊನೆ ಭಾಗಕ್ಕೆ ನಾಲೆ ನೀರು ಮರೀಚಿಕೆಯಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಅಡಿಕೆ, ತೆಂಗಿನ ತೋಟ ಉಳಿಸಿಕೊಳ್ಳುವುದು ಕಷ್ಟ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.