ದಾವಣಗೆರೆ: ಎಲ್ಲೆಡೆ ಪ್ರತಿಮೆ ನಿರ್ಮಾಣದ ಹಾವಳಿ ಹೆಚ್ಚಾಗುತ್ತಿದೆ. ಕೆಲವರು ಪ್ರತಿಮೆಗಳ ಪ್ರತಿಷ್ಠಾನದ ದಾಸ ರಾಗುತ್ತಿದ್ದು, ತತ್ವಗಳನ್ನು ಮರೆ ಯುತ್ತಿದ್ದಾರೆ ಎಂದು ಸಾಣೇಹಳ್ಳಿ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಮಿತ್ರವೃಂದ ಹಾಗೂ ನೂತನ ವಿದ್ಯಾಸಂಸ್ಥೆ ಏರ್ಪಡಿಸಿದ್ದ ಕೆ.ಸಿ ಪಾಟೀಲ ಅವರ ‘ಬುದ್ಧ – ಬಸವ’ ಕೃತಿಗಳು ಮತ್ತು ಎಸ್.ಎಸ್ ಮಠಪತಿ ಅವರ ‘ಬೆಸುಗೆ’ ಮತ್ತು ‘ಕುರುಡು ಕಾಂಚಾಣ’ ಹಾಗೂ ಅವರ 72ನೇ ಜನ್ಮದಿನದ ಸವಿ ನೆನಪಿಗಾಗಿ ‘ಜೀವನೋತ್ಸಾಹಿ’ ಅಭಿ ನಂದನಾ ಗ್ರಂಥ ಬಿಡುಗಡೆ ಸಮಾ ರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಬಹುತೇಕರು ವ್ಯಕ್ತಿ ಕಲ್ಯಾಣಕ್ಕೆ ಒತ್ತು ನೀಡುತ್ತಿದ್ದು, ಲೋಕ ಕಲ್ಯಾಣ ಮರೆ ಯುತ್ತಿದ್ದಾರೆ. ಹಣ, ಭೋಗ, ಲಾಲಸೆ ಹೆಚ್ಚುತ್ತಿದ್ದು, ಮಾನವೀಯತೆ ಇಲ್ಲ ವಾಗುತ್ತಿದೆ ಎಂದು ವಿಷಾದಿಸಿದರು. ನ್ಯಾಯ, ನಿಷ್ಠುರವಾದಿಗಳು ಪ್ರತಿಪಾದಿ ಸುವ ವಿಚಾರಗಳನ್ನು ದುಷ್ಟ ಶಕ್ತಿಗಳು ಸಹಿಸುತ್ತಿಲ್ಲ. ಸಂಶೋಧಕ ಡಾ.ಎಂ.ಎಂ. ಕಲುಬುರ್ಗಿ ಅವರನ್ನು ಹಾಡಹಗಲೇ ಹತ್ಯೆ ಮಾಡಲಾಗಿದೆ. ಗುಂಡೇಟಿಗೆ ವ್ಯಕ್ತಿ ಸತ್ತಿರಬಹುದು.
ಆದರೆ, ಸಂಸ್ಕೃತಿ ಮತ್ತು ವಿಚಾರವಂತಿಕೆಗೆ ಗುಂಡು ಇಡಲು ಸಾಧ್ಯವಿಲ್ಲ. ವ್ಯಕ್ತಿ ಪ್ರತಿಪಾದಿಸುವ ತತ್ವಗಳಿಗೆ ಸಾವೇ ಇಲ್ಲ ಎಂದು ಪ್ರತಿಪಾದಿಸಿದರು. ವಿಶ್ವದ ಮಹಾನ್ ಶಕ್ತಿಗಳಾದ ಬುದ್ಧ ಮತ್ತು ಬಸವಣ್ಣ ಅವರ ಕಾಲ ಮತ್ತು ಪ್ರದೇಶ ಬೇರೆ ಬೇರೆ ಇರಬಹುದು. ಆದರೆ, ಅವರ ಆಲೋಚನೆ, ತತ್ವಗಳು ಒಂದೇ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಕೆ.ಸಿ ಪಾಟೀಲ ಅವರ ‘ಬುದ್ಧ – ಬಸವ’ ಕೃತಿಗಳನ್ನು ಹಿರಿಯ ಪತ್ರಕರ್ತ ರಂಜಾನ್ ದರ್ಗಾ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ‘ಲಿಂಗಾಯತರು ವಿಸ್ಮೃತಿಗೆ ಒಳಗಾಗಿ ಧರ್ಮವನ್ನು ಮರೆತಿದ್ದಾರೆ. ಅವರಿಗೆ ಸ್ವತಂತ್ರ ಧರ್ಮವೇ ಇಲ್ಲವಾಗಿದೆ.
ರಾಜ್ಯದಲ್ಲಿ ಮಾನವ ಸಂಸ್ಕೃತಿ ಉಳಿಯಲು, ಅಹಿಂಸೆ ಸ್ಥಾಪನೆ ಯಾಗಲು, ಜನರು ಆತ್ಮೀಯತೆಯಿಂದ ಬದುಕಲು ಬಸವ ಸಂಸ್ಕೃತಿಯಿಂದ ಮಾತ್ರ ಸಾಧ್ಯ. ಇದನ್ನು ಸಮಸ್ತ ಲಿಂಗಾಯತರು ಅರ್ಥ ಮಾಡಿ ಕೊಳ್ಳಬೇಕು’ ಎಂದು ತಿಳಿಸಿದರು. ದೇಶ ಹೀನಾಯವಾದ ಅವ್ಯವಸ್ಥೆಗೆ ತಲುಪಿದ್ದು, ಇದಕ್ಕೆ ಬುದ್ಧ – ಬಸವಣ್ಣ ಅವರನ್ನು ಮರೆತಿರುವುದು ಇದಕ್ಕೆ ಕಾರಣ ಎಂದು ವಿಶ್ಲೇಷಿಸಿದರು.
ಬಸವ ಧರ್ಮ ಬದುಕಿಗೆ ಉಸಿರಾಗಬೇಕು. ಅವರ ತತ್ವಗಳನ್ನು ಅಳವಡಿಸಿಕೊಂಡಾಗ ಮಾತ್ರ ಜೀವನ ಸುಂದರವಾಗಲು ಸಾಧ್ಯ ಎಂದರು. ಸಮುದಾಯದ ಒಳಿತಿಗಾಗಿ ಬುದ್ಧ – ಬಸವಣ್ಣ ಎಲ್ಲ ನೋವು ಮತ್ತು ಅವಮಾನ ಸಹಿಸಿಕೊಂಡು ತ್ಯಾಗ ಮಾಡಿದ ಮಹನೀಯರು. ಅವರ ತತ್ವ ಗಳು ಸರಳವಾಗಿದ್ದು ಎಲ್ಲರೂ ಅನು ಸರಿಸಲು ಯೋಗ್ಯವಾಗಿವೆ ಎಂದರು.
ಬಸವಣ್ಣ ಅವರ ವಚನಗಳಲ್ಲಿ ಜಗತ್ತಿನ ಎಲ್ಲ ತತ್ವ, ಸಿದ್ಧಾಂತಗಳು ಅಡಗಿವೆ. ಅವರ ವಚನಗಳಿಗೆ ತಲೆಬಾಗದಿದ್ದರೆ ಮನುಷ್ಯರೇ ಅಲ್ಲ ಎಂದು ಅಭಿಪ್ರಾಯಪಟ್ಟರು. ಜೀವನ ದಲ್ಲಿ ಆಯಾಸ ಕಾಣದ ವ್ಯಕ್ತಿ ಬಸವಣ್ಣ. ತಳ ವರ್ಗದ ಜನರ ಪರವಾಗಿ ದುಡಿದು ಅವರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ವ್ಯಕ್ತಿ ಎಂದು ಹೇಳಿದರು.
ಮಠಗಳು ಎಲ್ಲ ತೆರನಾದ ಅಜ್ಞಾನ ವಿರೋಧಿಸಬೇಕು. ವೈಚಾರಿಕ ಹಾಗೂ ಸಮಾನತೆಯನ್ನು ಬಿತ್ತುವ ಕೇಂದ್ರ ಗಳಾಗಬೇಕು ಎಂದು ಅಭಿಪ್ರಾಯ ಪಟ್ಟರು. ಶಾಸಕ ಎಸ್.ಎಸ್ ಮಲ್ಲಿ ಕಾರ್ಜುನ ‘ಬೆಸುಗೆ’ ಹಾಗೂ ‘ಕುರುಡು ಕಾಂಚಾಣ’ ಕೃತಿಗಳನ್ನು ಬಿಡು ಗಡೆಗೊಳಿಸಿ ಮಾತ ನಾಡಿದರು.
ಹಿರಿಯ ಪತ್ರಕರ್ತ ಗುಡಿಹಳ್ಳಿ ನಾಗರಾಜ್ ಎಸ್.ಎಸ್ ಮಠಪತಿ ಅವರ ‘ಜೀವನೋ ತ್ಸಾಹ’ ಅಭಿನಂದನಾ ಗ್ರಂಥ ಬಿಡುಗಡೆ ಗೊಳಿಸಿ ಮಾತನಾಡಿದರು. ಉಪನ್ಯಾಸಕಿ ಸುಮತಿ ಜಯಪ್ಪ ಕೃತಿಗಳ ಕುರಿತು ಉಪನ್ಯಾಸ ನೀಡಿದರು. ಕಾನೂನು ತಜ್ಞ ಪ್ರೊ.ಎಸ್.ಎಚ್. ಪಟೇಲ್ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.