ದಾವಣಗೆರೆ: ಮನು ಸಂಸ್ಕೃತಿಗೆ ಪೂರಕವಾದ ಪುಸ್ತಕ ಆಯ್ಕೆ ಮಾಡಿದ ಪ್ರೊ.ಹಂಪಣ್ಣ ಸಮಿತಿ ವಜಾ ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.
ಪ್ರೌಢಶಾಲಾ ಗ್ರಂಥಾಲಯಗಳಿಗೆ 2013–14ನೇ ಸಾಲಿಗೆ ₨ 2 ಕೋಟಿ ಮೊತ್ತದ ಪುಸ್ತಕ ಸರಬರಾಜು ಮಾಡಲು ಶಿಕ್ಷಣ ಇಲಾಖೆ ಪ್ರೊ.ಹಂಪಣ್ಣ ನೇತೃತ್ವದ ಸಮಿತಿಗೆ ಪುಸ್ತಕ ಆಯ್ಕೆ ಅವಕಾಶ ನೀಡಿತ್ತು. ಈ ಸಮಿತಿ ಮನು ಸಂಸ್ಕೃತಿಗೆ ಪೂರಕವಾದ ಪುಸ್ತಕ ಆಯ್ಕೆ ಮಾಡಿರುವುದು ವಿಷಾದಕರ ಸಂಗತಿ ಎಂದು ರಾಜ್ಯ ಸಂಘಟನಾ ಸಂಚಾಲಕ ಆಲೂರು ನಿಂಗರಾಜು ಹೇಳಿದ್ದಾರೆ.
ವೈಜ್ಞಾನಿಕ, ಪ್ರಗತಿಪರ, ಧರ್ಮ ನಿರಪೇಕ್ಷ ಮನೋಭಾವ ಸೃಷ್ಟಿಬೇಕಾದ ಪ್ರಸ್ತಕಗಳನ್ನು ಆಯ್ಕೆ ಮಾಡುವಲ್ಲಿ ವಿಫಲರಾಗಿ ಶಿಕ್ಷಣ ವ್ಯವಸ್ಥೆಯನ್ನು ಕೇಸರೀಕರಣಗೊಳಿಸಲು ಹಂಪಣ್ಣ ಸಮಿತಿ ಹೊರಟಿದೆ. ಕೂಡಲೇ ಆ ಸಮಿತಿ ವಜಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಗಲ್ಲಿಗೇರಿಸಿ: ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಝಂಜರವಾಡದ ಅಪ್ಪಯ್ಯಸ್ವಾಮಿ ಮಠದ ಸದಾಶಿವ ಸ್ವಾಮಿಯನ್ನು ಗಲ್ಲಿಗೇರಿಸಿ. ಸ್ವಾಮೀಜಿ ಮುಗ್ಧ ಜನರನ್ನು ಅದರಲ್ಲೂ ದಲಿತ ಹೆಣ್ಣು ಮಕ್ಕಳನ್ನು ಮೋಸದ ಕೂಪಕ್ಕೆ ತಳ್ಳಿದ್ದಾರೆ. ಸ್ವಾಮೀಜಿ ಅವರನ್ನು ಗಲ್ಲಿಗೇರಿಸಬೇಕು. ಸಹಚರರಾದ ಸುರೇಶ ಮುತಗಿ, ಗುರುಪಾದಗೌಡ ಪಾಟೀಲ ಹಾಗೂ ಚಿತ್ತಯ್ಯ ಅವರನ್ನು ಗಡಿಪಾರು ಮಾಡಬೇಕು ಎಂದು ದಸಂಸ ಆಗ್ರಹಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.