ADVERTISEMENT

ಬಿಜೆಪಿ ಸರ್ಕಾರದಿಂದ ಅಭಿವೃದ್ಧಿ ಕಾರ್ಯ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 8:00 IST
Last Updated 10 ಅಕ್ಟೋಬರ್ 2011, 8:00 IST

ನ್ಯಾಮತಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಅವಧಿಯಲ್ಲಿ ಹಿಂದಿನ ಯಾವ ಸರ್ಕಾರ ಮಾಡದಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದೆ ಎಂದು ಸಂಸತ್ ಸದಸ್ಯ ಜಿ.ಎಂ. ಸಿದ್ದೇಶ್ವರ ಸಮರ್ಥಿಸಿಕೊಂಡರು.

ಸಮೀಪದ ಆರುಂಡಿ ಗ್ರಾಮದಲ್ಲಿ ಭಾನುವಾರ ವಿನಾಯಕ ಗ್ರಾಮಾಭಿವೃದ್ಧಿ ಟ್ರಸ್ಟ್, ನರಸಿಂಹಸ್ವಾಮಿ ಟ್ರಸ್ಟ್, ಗ್ರಾಮದ ಸರ್ಕಾರಿ ನೌಕರರು ಹಾಗೂ ಗ್ರಾಮಸ್ಥರ ಆಶ್ರಯದಲ್ಲಿ ನಡೆದ ಸಮುದಾಯ ಭವನದ ಶಂಕುಸ್ಥಾಪನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರೈತರಿಗೆ ಶೇ. 1ರಷ್ಟು ಬಡ್ಡಿ ಸಾಲ, ಡೈರಿ ಹಾಲಿಗೆ ್ಙ 2ರಷ್ಟು ಸಬ್ಸಿಡಿ, ಶಾಲಾ ಮಕ್ಕಳಿಗೆ ಉಚಿತ ಬೈಸಿಕಲ್, ಪಠ್ಯ-ಪುಸ್ತಕಗಳು, ಬಿಸಿಯೂಟದಂತಹ ಯೋಜನೆ ಮೂಲಕ ರಾಜ್ಯದ ಹಿಂದುಳಿದವರ ಅಭಿವೃದ್ಧಿ ಕೈಗೊಳ್ಳಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಮೂಲಕ  ಪರಿಶಿಷ್ಟರು, ವಿಕಲಚೇತನರು, ಗಂಗಾಕಲ್ಯಾಣ ಯೋಜನೆ ಜಾರಿಗೆ ತರಲಾಗಿದೆ ಎಂದರು.

ಸಚಿವ ಎಂ.ಪಿ. ರೇಣುಕಾಚಾರ್ಯ ಅವರೊಂದಿಗೆ ಚರ್ಚಿಸಿ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.

ತಾಲ್ಲೂಕಿನ ಸರ್ವಾಂಗಿಣ ಅಭಿವೃದ್ಧಿ ಮತ್ತು ಬಡವರ ಹಿತರಕ್ಷಣೆಗೆ ನನ್ನ ಮೊದಲ ಆದ್ಯತೆ ಎಂದು ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಭರವಸೆ ನೀಡಿದರು.

ಈಗಾಗಲೇ ಗ್ರಾಮದ ಪರಿಶಿಷ್ಟರ ಕಾಲೊನಿಗೆ ್ಙ ಒಂದು ಲಕ್ಷ, ಸಂಸದರ ನಿಧಿಯಿಂದ ್ಙ 2 ಲಕ್ಷ, ಶಾಲಾ ಕೊಠಡಿಗಳ ನಿರ್ಮಾಣಕ್ಕೆ ್ಙ 7.5 ಲಕ್ಷ, ಆರುಂಡಿ-ಯರಗನಾಳ ರಸ್ತೆಗೆ ್ಙ 5 ಲಕ್ಷ, ಕೆರೆ ದುರಸ್ತಿಗೆ ್ಙ 3.5 ಲಕ್ಷ, ಗೋವಿನಕೊವಿ- ಶಿಕಾರಿಪುರ ರಸ್ತೆಗೆ ್ಙ 5 ಕೋಟಿ  ನೀಡಿರುವುದಾಗಿ ಹೇಳಿದರು.

ಈಚೆಗೆ ಸರ್ಕಾರದ ಕಾನೂನು ಬಿಗಿಯಾಗಿದ್ದು, ಯಾವುದೇ ಸಮುದಾಯ ಭವನ ನಿರ್ಮಾಣ ಕಾಮಗಾರಿಗಳಿಗೆ ಮುಂಚಿತವಾಗಿ ಹಣ ಬಿಡುಗಡೆ ಮಾಡುವಂತಿಲ್ಲ. ಮೊದಲ ಹಂತದ ಕಾಮಗಾರಿ ಪೂರ್ಣಗೊಂಡ ನಂತರ ಹಣ ಬಿಡುಗಡೆ ಮಾಡಲಾಗುವುದು. ಗ್ರಾಮದ ಸಮುದಾಯ ಭವನಕ್ಕೆ ಮುಂದಿನ ದಿನಗಳಲ್ಲಿ ಅನುದಾನ ನೀಡುವ ಭರವಸೆ ನೀಡಿದರು.

ಜಿ.ಪಂ. ಸದಸ್ಯೆ ಉಷಾ, ತಾ.ಪಂ. ಸದಸ್ಯ ಎಸ್.ಎಚ್. ರುದ್ರೇಶ್, ಮಾಜಿ ಶಾಸಕ ಡಾ.ಡಿ.ಬಿ. ಗಂಗಪ್ಪ, ಕೋಮೇಶ್ವರಪ್ಪ, ತಾಲ್ಲೂಕು ಬಿಜೆಪಿ ಘಟಕದ ಆಧ್ಯಕ್ಷ ಶಾಂತರಾಜ ಪಾಟೀಲ್, ಶಕುಂತಲಮ್ಮ, ಗೀತಾ, ಕೆ.ಜಿ. ಬಸಪ್ಪ, ಎಂ. ರಮೇಶ್, ಎಂ.ಜಿ. ಸೋಮಶೇಖರ್, ಎಚ್. ಬಸವನಗೌಡ, ಬೋಜಚಾರ್, ರಂಗಮ್ಮ, ಎಚ್. ಸರೋಜಮ್ಮ,  ಇಂದ್ರಮ್ಮ, ಪ್ರಭಾರ ಇಒ ಕೆ.ಸಿ. ಮಲ್ಲಿಕಾರ್ಜುನ ಉಪಸ್ಥಿತರಿದ್ದರು.

ವಿನಾಯಕ ಟ್ರಸ್ಟ್ ಅಧ್ಯಕ್ಷ ಡಿ.ಎನ್. ಶ್ರೀನಿವಾಸ ಅಧ್ಯಕ್ಷತೆ ವಹಿಸಿದ್ದರು. ಟಿ. ಜಯಮ್ಮ ಸ್ವಾಗತಿಸಿದರು. ಉಪನ್ಯಾಸಕಿ ಓಂಕಾರಮ್ಮ ಕಾರ್ಯಕ್ರಮ ನಿರೂಪಿಸಿದರು. ನಾಗರಾಜ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.