ದಾವಣಗೆರೆ: ನಗರದ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ಹೈನುಗಾರಿಕೆ ರೈತರ ಕೂಟದ ಮಾಸಿಕ ಸಭೆ ನಡೆಯಿತು.
ಕೂಟದ ಸದಸ್ಯರಿಗೆ ಉತ್ಕೃಷ್ಟ ರಾಸು ತಳಿಗಳನ್ನು ಪಡೆಯಲು ಅನುಕೂಲವಾಗಲಿ ಎಂದು ಕೃತಕ ಗರ್ಭಧಾರಣೆ ಕೇಂದ್ರವನ್ನು ಪಶುವೈದ್ಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಟಿ.ಎಚ್.ಶಂಕರಪ್ಪ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿ, ರಾಸುಗಳಿಗೆ ಜೀವ ವಿಮೆ ಮಾಡಿಸಿದರೆ ಬಹಳ ಅನುಕೂಲವಿದೆ ಎಂದು ತಿಳಿಸಿದರು.
ಪಶು ಔಷಧಿ ವ್ಯಾಪಾರಿ ಬಿ.ಜೆ.ವೀರಣ್ಣ ಮಾತನಾಡಿ, ವಿದೇಶಿ ತಳಿಗಳ ವೀರ್ಯವನ್ನು ಅಮದು ಮಾಡಿಕೊಳ್ಳುವುದರ ಬಗ್ಗೆ ಸಭೆಗೆ ಮಾಹಿತಿ ನೀಡಿದರು.
ರೈತರ ಒಕೂಟದ ಅಧ್ಯಕ್ಷ ಹರೀಶ್ ಆರ್.ಪಾಟೀಲ, ಕೃತಕ ಗರ್ಭಧಾರಣೆ ಕೇಂದ್ರದ ನಿರ್ವಹಣೆ, ಶುದ್ಧ ಹಾಲು ಉತ್ಪಾದನೆ, ಮಾರಾಟದ ಬಗ್ಗೆ ಮಾಹಿತಿ ನೀಡಿದರು.
`ಅಮೂಲ್ಯ' ಆರ್ಥಿಕ ಸಾಕ್ಷರತಾ ಕೇಂದ್ರದ ರಘುನಾಥರಾವ್ ತಾಪ್ಸೆ ಮಾತನಾಡಿ, 20 ತಿಂಗಳಿಂದ ಗ್ರಾಮದ ಮನೆ ಮನೆಗಳಿಗೆ ತೆರಳಿ, ಗ್ರಾಮ ಸಭೆಗಳಲ್ಲಿ ಭಾಗಿಯಾಗಿ `ಆರ್ಥಿಕ ಸಾಕ್ಷರತೆ' ನೀಡಲಾಗುತ್ತಿದೆ ಎಂದು ಹೇಳಿದರು.
ಕ್ಷೇತ್ರ ವೀಕ್ಷಣೆ: ಯುಪಿಎಲ್ (ಅಡ್ವಾಂಟ) ಕಂಪೆನಿ ಹಾಗೂ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ ಹರಪನಹಳ್ಳಿ ತಾಲ್ಲೂಕಿನ ಹಿರೇಮ್ಯೋಗಳಗೆರೆ ಗ್ರಾಮದ ಹರೀಶ್ ಆರ್.ಪಾಟೀಲ ಅವರ ಜಮೀನಿನಲ್ಲಿ ಮೇವಿನ ಬೆಳೆಗಳ ಕ್ಷೇತ್ರ ವೀಕ್ಷಣೆ ಏರ್ಪಡಿಸಲಾಗಿತ್ತು. ಕಂಪೆನಿಯ ವ್ಯವಸ್ಥಾಕ ಟಿ.ನಾಗರಾಜ ಹಾಗೂ ಮಾರಾಟ ವ್ಯವಸ್ಥಾಪಕ ಗವಿಸಿದ್ದಪ್ಪ ಗ್ರಾಮಸ್ಥರಿಗೆ ಮಾಹಿತಿ ನೀಡಿದರು.
ಹೈನುಗಾರಿಕೆ ರೈತರ ಕೂಟದ ಉಪಾಧ್ಯಕ್ಷ ಪರಮೇಶ್ವರಪ್ಪ, ನಿರ್ದೇಶಕ ದೀಪಕ್ ಕ್ಷೀರಸಾಗರ, ಎಂ.ಪಿ.ಮಹಾದೇವಪ್ಪ ಹಾಜರಿದ್ದರು.
ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಪಶು ತಜ್ಞ ಡಾ.ಜಿ.ಕೆ.ಜಯದೇವಪ್ಪ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.