ಮಲೇಬೆನ್ನೂರು: ಸಮೀಪದ ವಡೆಯರ ಬಸವಾಪುರದ ಬಸವೇಶ್ವರ ಹಾಗೂ ಹಳ್ಳಿಹಾಳ್‌ನಲ್ಲಿ ಮುರುಡ ಬಸವೇಶ್ವರ ರಥೋತ್ಸವ ಗುರುವಾರ ವೈಭವದಿಂದ ಜರುಗಿತು.
ಗ್ರಾಮದ ರಾಜಬೀದಿಯಲ್ಲಿ ಉಚ್ಛಾಯದ ನಂತರ ರಥಾರೋಹಣ ಆಯಿತು. ಸಾಂಪ್ರದಾಯಿಕ ಬಲಿದಾನ, ರಥಪೂಜೆಯ ನಂತರ ಜನತೆ ತೆಂಗಿನಕಾಯಿ, ಫಲ, ಉತ್ತತ್ತಿ, ಮಂಡಕ್ಕಿ ಸಮರ್ಪಿಸಿದರು.
ಮಂಗಳವಾದ್ಯ, ಡೊಳ್ಳು, ತಮಟೆ, ಭಜನಾತಂಡ, ಕೀಲು ಕುದುರೆ ಕುಣಿಯುವ ತಂಡ ಭಾಗವಹಿಸಿದ್ದವು.
ದೇವಾಲಯವನ್ನು ವಿದ್ಯುತ್‌ದೀಪ ಹಾಗೂ ರಥವನ್ನು ಸುಂದರವಾಗಿ ಹೂವು, ಬಲೂನ್, ಧ್ವಜ ಪತಾಕೆಗಳಿಂದ ಅಲಂಕರಿಸಲಾಗಿತ್ತು. ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.