ADVERTISEMENT

ಸಾಕಾರವಾಗದ ಗ್ರಾಮ ಸ್ವರಾಜ್ಯ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2012, 5:40 IST
Last Updated 20 ಮಾರ್ಚ್ 2012, 5:40 IST

ದಾವಣಗೆರೆ:  ಗ್ರಾಮ ಸ್ವರಾಜ್ಯ ಆದರ್ಶ ಕಲ್ಪನೆ ಎಲ್ಲರಿಗೂ ಬೋಧಿಸಲಾಗುತ್ತಿದ್ದರೂ, ಅನುಷ್ಠಾನಕ್ಕೆ ಬರುತ್ತಿಲ್ಲ ಎಂದು ಪ್ರೊ.ಎಸ್.ಎಚ್. ಪಟೇಲ್ ಅಭಿಪ್ರಾಯಪಟ್ಟರು.

ಸಮೀಪದ ಕೊಂಡಜ್ಜಿಯಲ್ಲಿ  ಸ್ಕೌಟ್ ಮತ್ತು ಗೈಡ್ಸ್ ತರಬೇತಿ ಕೇಂದ್ರದಲ್ಲಿ ಸಾಗರದ ಲೋಹಿಯಾ ಜನ್ಮಶತಾಬ್ದಿ ಪ್ರತಿಷ್ಠಾನ ಸೋಮವಾರ ಆಯೋಜಿಸಿದ್ದ ಜಾಗತೀಕರಣ ಮತ್ತು ಗ್ರಾಮ ಸ್ವರಾಜ್ಯದ ಕನಸು~ ವಿಚಾರ ಸಂಕಿರಣ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಗ್ರಾಮ ಪಂಚಾಯ್ತಿಗಳಲ್ಲಿ  ಗ್ರಾಮ ಸ್ವರಾಜ್ಯದ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡಲ್ಲಿ ಪ್ರಗತಿ ಹಾದಿಯಲ್ಲಿ  ಇರುತ್ತಿದ್ದವು. ಗ್ರಾಮಸ್ವರಾಜ್ಯ ಕನಸು ಕಂಡಿರುವ ಲೋಹಿಯಾ, ಮಹಾತ್ಮ ಗಾಂಧಿ ಕನಸು ಸಾಕಾರವಾಗುತ್ತಿಲ್ಲ ಎಂದು ವಿಷಾದಿಸಿದರು.

ಲೋಹಿಯಾ ಪ್ರತಿಷ್ಠಾನದ ಅಧ್ಯಕ್ಷ ಡಿ.ಎಸ್. ನಾಗಭೂಷಣ, ಕವಯತ್ರಿ ಸವಿತಾ ನಾಗಭೂಷಣ, ಪ್ರೊ.ಬಿ.ಪಿ. ವೀರೇಂದ್ರ ಕುಮಾರ್, ಪ್ರೊ.ಬಿ.ವಿ. ವೀರಭದ್ರಪ್ಪ, ತೊಗ್ಗಳ್ಳಿಗೌಡ್ರು ಪುಟ್ಟರಾಜು,  ಎನ್.ಎಂ. ಕುಲಕರ್ಣಿ, ರಾಜಾರಾಮ್  ತೋಳ್ಪಡಿ, ಅನಸೂಯಮ್ಮ, ಶೌರೀಶ್ ಇತರರು ಭಾಗವಹಿಸಿದ್ದರು,

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.