ನ್ಯಾಮತಿ: ಸರ್ಕಾರದ ಯೋಜನೆಗಳು ಆರ್ಹ ಫಲಾನುಭವಿಗಳಿಗೆ ಸಿಗುವ ನಿಟ್ಟಿನಲ್ಲಿ ಮಧ್ಯವರ್ತಿಗಳನ್ನು ದೂರವಿಡಲು ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ ಎಂದು ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ತಿಳಿಸಿದರು.
ಸಮೀಪದ ಸವಳಂಗ-ಚಿನ್ನಿಕಟ್ಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬಸವ ವಸತಿ ಯೋಜನೆಯ ಫಲಾನುಭವಿಗಳ ಆಯ್ಕೆ ಕುರಿತು ಶುಕ್ರವಾರ ನಡೆದ ಗ್ರಾಮಸಭೆಯಲ್ಲಿ ಮಾದಾಪುರ, ಕೊಡತಾಳು, ಮಾಚಿಗೊಂಡನಹಳ್ಳಿ, ಸಾಲಬಾಳು ಗ್ರಾಮಗಳಿಂದ ಸುಮಾರು 600 ಅರ್ಜಿಗಳನ್ನು ಸ್ವೀಕರಿಸಿ ಅವರು ಮಾತನಾಡಿದರು.
ಆವಶ್ಯಕ ಮೂಲ ಸೌಲಭ್ಯಗಳಾದ ವಸತಿ ಸಮಸ್ಯೆ ನೀಗಿಸಿ ಸೂರಿಲ್ಲದವರಿಗೆ ಸೂರು ಒದಗಿಸಲು ನಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಿದೆ, ಎಲ್ಲಾ ವರ್ಗದ ಆರ್ಹ ಫಲಾನುಭವಿಗಳಿಗೆ ಅನುದಾನ ನೀಡಲಾಗುವುದು ಎಂದರು.
ನಿವೇಶನ ರಹಿತರಿಗೆ ನಿವೇಶನ ಒದಗಿಸುವ ನಿಟ್ಟಿನಲ್ಲಿ, ಆಯಾ ಗ್ರಾಮಾಡಳಿತ ಆಸಕ್ತಿ ವಹಿಸಿ ಖಾಸಗಿಯವರು ಜಮೀನು ನೀಡಲು ಮುಂದೆ ಬಂದಲ್ಲಿ, ಸರ್ಕಾರಿ ದರದ ಪ್ರಕಾರ ಭೂಮಿ ಖರೀದಿಸಿ ನಿವೇಶನಗಳಾನ್ನಾಗಿ ಪರಿವರ್ತಿಸಿ ,ನಿಬಂಧನೆ ಗೊಳಪಟ್ಟು ವಿತರಿಸಲಾಗುವುದು ಹಾಗೂ ಗುಂಪು ಮನೆಗಳ ನಿರ್ಮಾಣಕ್ಕೂ ಮಂಜೂರು ಮಾಡಿಸಲಾಗುವುದು ಎಂದರು.
ಸವಳಂಗ ಗ್ರಾಮದ ಅಭಿವೃದ್ಧಿಗೆ ಒತ್ತುನೀಡಿ ಸುಮಾರು ್ಙ 23 ಲಕ್ಷ ವೆಚ್ಚದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಕಟ್ಟಡ, ್ಙ 47 ಲಕ್ಷ ವೆಚ್ಚದಲ್ಲಿ ಪರಿಶಿಷ್ಟರ ಕಾಲೊನಿಯಲ್ಲಿ ಕಾಂಕ್ರಿಟ್ ರಸ್ತೆ-ಚರಂಡಿ ನಿರ್ಮಾಣ, ್ಙ 15 ಲಕ್ಷ ವೆಚ್ಚದಲ್ಲಿ ಪಶು ಆಸ್ಪತ್ರೆ ಕಟ್ಟಡ ಹಾಗೂ ಕೆರೆ ಅಭಿವೃದ್ಧಿಗೆ ್ಙ 3.50 ಕೋಟಿ ಮಂಜೂರಾಗಿದ್ದು, ಟೆಂಡರ್ ಆಗಿದೆ, ಏತಾ ನೀರಾವರಿ ಯೋಜನೆಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ವಿವರಿಸಿದರು.
ಚಿನ್ನಿಕಟ್ಟೆ ಗ್ರಾ.ಪಂ. ನೂತನ ಕಟ್ಟಡ ್ಙ 20 ಲಕ್ಷ ಅನುದಾದಲ್ಲಿ ಕಾಮಗಾರಿ ನಡೆಯುತ್ತಿದೆ, ಗಂಗಾ ಕಲ್ಯಾಣ ಯೋಜನೆ ಅಡಿ ಎಲ್ಲಾ ಗ್ರಾಮಗಳ ಪರಿಶಿಷ್ಟ ಫಲಾನುಭವಿಗಳಿಗೆ ಕೊಳವೆಬಾವಿ, ಮೋಟಾರ್, ಪೈಪ್‌ಲೈನ್‌ಗಳಿಗೆ ಸಾಕಷ್ಟು ಅನುದಾನ ನೀಡಲಾಗಿದೆ ಎಂದರು.
ಸವಳಂಗ ಗ್ರಾ.ಪಂ. ಅಧ್ಯಕ್ಷ ಅಣ್ಣಪ್ಪನಾಯ್ಕ, ಉಪಾಧ್ಯಕ್ಷೆ ಲಲಿತಮ್ಮ, ಚಿನ್ನಿಕಟ್ಟೆ ಗ್ರಾ.ಪಂ. ಅಧ್ಯಕ್ಷ ವಿಜಯಪ್ಪ, ವೀರೇಶ, ಜಿ.ಪಂ. ಸದಸ್ಯ ಜಿ. ಶಿವರಾಮನಾಯ್ಕ, ತಾ.ಪಂ. ಸದಸ್ಯೆ ಪ್ರೇಮಮ್ಮ, ಪ್ರಭಾರ ಇಒ ಕೆ.ಸಿ. ಮಲ್ಲಿಕಾರ್ಜುನ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.