ADVERTISEMENT

ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್‌: ಅಂತಿಮ ಸುತ್ತಿಗೆ ಬಿಐಇಟಿ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2018, 9:44 IST
Last Updated 29 ಮಾರ್ಚ್ 2018, 9:44 IST

ದಾವಣಗೆರೆ: ಬಿಐಇಟಿ ಕಾಲೇಜಿನ 3 ತಂಡಗಳು ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾಗಿವೆ ಎಂದು ಕಾಲೇಜು ಪ್ರಾಂಶುಪಾಲ ಡಾ.ಎಸ್‌.ಮುರುಗೇಶ್‌ ಬಾಬು ಪ್ರಕಟಣೆ ತಿಳಿಸಿದರು.

ನಗರದ ಬಾಪೂಜಿ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್‌ ವಿಭಾಗದ 2 ತಂಡ ಹಾಗೂ ಮಾಹಿತಿ ತಂತ್ರಜ್ಞಾನ ವಿಭಾಗದ 1 ತಂಡ ಮಾರ್ಚ್‌ 30 ಹಾಗೂ 31ರಂದು ನಾಗ್ಪುರ ಹಾಗೂ ನೋಯ್ಡಾದಲ್ಲಿ ನಡೆಯಲಿರುವ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಭಾಗವಹಿಸಲಿವೆ ಎಂದು ತಿಳಿಸಿದ್ದಾರೆ.

ವಿದ್ಯಾರ್ಥಿಗಳಲ್ಲಿರುವ ಸೃಜನ ಶೀಲತೆಯನ್ನು ರಾಷ್ಟ್ರದ ಅಭಿವೃದ್ಧಿಗೆ ಬಳಸಿಕೊಳ್ಳಲು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್‌ ಆಯೋಜಿಸಿದ್ದು, 17,400 ತಂಡಗಳ 1 ಲಕ್ಷ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಭಾಗವಹಿಸಿದ್ದವು. ಅವುಗಳಲ್ಲಿ 1,296 ತಂಡಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿವೆ.

ADVERTISEMENT

ಸತತ 36 ಗಂಟೆಗಳ ಪ್ರೋಗ್ರಾಮಿಂಗ್ ಸ್ಪರ್ಧೆ ಇದಾಗಿದ್ದು, ನೋಡೆಲ್‌ ಸೆಂಟರ್‌ಗಳಲ್ಲಿ ನಡೆಯುತ್ತದೆ. ಬಿಐಇಟಿ ಕಾಲೇಜಿನ ಡೆಟಾ ಡೆವಿಲ್ಸ್ ತಂಡದಿಂದ ಬಿ.ಜಿ.ನಚಿಕೇತ, ಎಸ್‌.ರೋಹನ್, ಮಹಮ್ಮದ್ ಸುಹೇಲ್,  ಶ್ರೇಯಸ್, ಅನುಷಾ, ನಮನ್ ಆನಂದ್, ಮಾರ್ಗದರ್ಶಕರಾದ ವಸೀಂ ಖಾನ್, ವಾಣಿ ಭಾಗವಹಿಸಿದ್ದಾರೆ.

ಜಾರ್ವಿಸ್‌ ತಂಡದಿಂದ ದಿನಕರ ಚೌಧರಿ, ವೇಣುಗೋಪಾಲ್ ರೆಡ್ಡಿ, ಆರುಶ್ ಕುಮಾರ್, ಬ್ರಿಜೇಶ್ ಕುಮಾರ್, ಸುಷ್ಮಿತಾ ಪಾಟಕ್, ಪ್ರಿಯದರ್ಶಿನಿ, ಮಾರ್ಗದರ್ಶಕರಾದ ವಿವೇಕ್ ಬೋಂಗಾಲೆ, ರಾಜೇಶ್ವರಿ ಕಿಸ್ಸನ್ ಹಾಗೂ ಮಾಹಿತಿ ತಂತ್ರಜ್ಞಾನ ವಿಭಾಗಗದಿಂದ ಶ್ರೀನಾಗ್, ಅರಗ, ಚಂದನ ಕುಮಾರ್, ಚಂದನ, ವರುಣ್ ಪಾಟೀಲ್, ಪ್ರತೀಕ್ ಜೈನ್, ಬಿಂದು, ಮಾರ್ಗದರ್ಶಕರಾದ ಪುನೀತ್, ಕೊಟ್ರಮ್ಮ ಭಾಗವಹಿಸುತ್ತಿದ್ದಾರೆ.

ಆಯ್ಕೆಯಾದ ತಂಡಗಳಿಗೆ ಬಿಐಇಟಿ ಛೇರ್ಮನ್‌ ಎ.ಸಿ.ಜಯಣ್ಣ, ನಿರ್ದೇಶಕ ವೈ.ವೃಷಭೇಂದ್ರಪ್ಪ, ಪ್ರಾಂಶುಪಾಲ ಡಾ.ಎಸ್. ಸುಬ್ರಹ್ಮಣ್ಯಸ್ವಾಮಿ ಅವರೂ ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.