ADVERTISEMENT

ಹೊನ್ನಾಳಿ ಸಂತೆಯಲ್ಲಿ ಬೀದಿ ದನಗಳ ಕಾಟ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2017, 6:28 IST
Last Updated 16 ಅಕ್ಟೋಬರ್ 2017, 6:28 IST

ಹೊನ್ನಾಳಿ: ಪಟ್ಟಣದಲ್ಲಿ ಪ್ರತಿ ಬುಧವಾರ ನಡೆಯುವ ವಾರದ ಸಂತೆಯಲ್ಲಿ ಬೀಡಾಡಿ ದನಗಳ ಕಾಟ ಹೆಚ್ಚಾಗುತ್ತಿದೆ. ಸಂತೆ ಮೈದಾನವನ್ನು ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ಆದರೆ, ಸಂತೆ ಮಾಡಲು ಹೋದವರಿಗೆ ಮತ್ತು ತರಕಾರಿ ವ್ಯಾಪಾರಿಗಳಿಗೆ ಬೀದಿ ದನಗಳಿಂದ ಕಿರಿ ಕಿರಿ. 20ಕ್ಕೂ ಹೆಚ್ಚು ಬೀದಿ ದನಗಳು ಸೊಪ್ಪು, ತರಕಾರಿ, ಮಾರಾಟ ಮಾಡುವವರ ಮಧ್ಯೆ ನುಗ್ಗಿ ಚೆಲ್ಲಾಪಿಲ್ಲಿ ಮಾಡಿ, ತಿಂದು ಬಿಸಾಡುತ್ತವೆ.

ಅವುಗಳನ್ನು ಓಡಿಸಲು ಮುಂದಾದರೆ ಜನರತ್ತ ನುಗ್ಗಿ ಬರುತ್ತವೆ. ಅವುಗಳಿಂದ ಪಾರಾಗುವ ಯತ್ನದಲ್ಲಿ ಪೆಟ್ಟು ತಿಂದ ಜನ ‘ಸಾಕಪ್ಪಾ ಸಾಕು ಈ ಸಂತೆ ಸಹವಾಸ’ ಎಂದು ಹಿಡಿಶಾಪ ಹಾಕುತ್ತಾರೆ.

ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಮುಖ್ಯ ರಸ್ತೆಯ ಎಡಭಾಗದಲ್ಲಿ ನಿಲ್ಲಿಸಿದ ಬೈಕ್‌ಗಳ ಸೈಡ್‌ ಬ್ಯಾಗ್‌ಗಳನ್ನೂ ದನಗಳು ಬಿಡುವುದಿಲ್ಲ. ಅವುಗಳನ್ನು ತೆರೆದು ಅದರಲ್ಲಿನ ಹಣ್ಣು, ತರಕಾರಿಗಳ ತಿನ್ನಲು ಪಳಗಿಬಿಟ್ಟಿವೆ.

ADVERTISEMENT

ಬೈಕ್ ನಿಲ್ಲಿಸಿ ಹೋದವರು ನೂರಾರು ರೂಪಾಯಿ ಕೊಟ್ಟು ತಂದ ಹಣ್ಣು, ತರಕಾರಿಯನ್ನು ಕ್ಷಣ ಮಾತ್ರದಲ್ಲಿ ತಿಂದುಹಾಕುತ್ತಿವೆ.
ಪಟ್ಟಣ ಪಂಚಾಯ್ತಿಯವರು ಈ ದನಗಳ ಕಾಟಕ್ಕೆ ಕಡಿವಾಣ ಹಾಕಲು ತೀರ್ಮಾನ ತೆಗೆದುಕೊಳ್ಳಬೇಕು ಎನ್ನುವುದು ಸಾರ್ವಜನಿಕರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.