ADVERTISEMENT

ಕಾರಿನಲ್ಲಿ ಸಿಕ್ಕಿದ್ದ ₹ 1.48 ಕೋಟಿ ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2021, 1:55 IST
Last Updated 7 ಫೆಬ್ರುವರಿ 2021, 1:55 IST

ದಾವಣಗೆರೆ: ನಗರದ ಕೆ.ಆರ್.ರಸ್ತೆ ಗ್ಯಾಲಕ್ಸಿ ಶಾದಿ ಮಹಲ್ ಬಳಿ ಶುಕ್ರವಾರ ರಾತ್ರಿ ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ ವೇಳೆ ವಶಪಡಿಸಿಕೊಂಡ ₹ 1.48 ಕೋಟಿಯನ್ನು ಆದಾಯ ತೆರಿಗೆ ಇಲಾಖೆಗೆ ಪೊಲೀಸರು ಹಸ್ತಾಂತರಿಸಿದ್ದಾರೆ.

ಹುಬ್ಬಳ್ಳಿ–ಧಾರವಾಡದ ಆದಾಯ ತೆರಿಗೆ ಇಲಾಖೆಸಹಾಯಕ ನಿರ್ದೇಶಕರು ಹಾಗೂ ತನಿಖಾಧಿಕಾರಿಗಳ ತಂಡವು ಶನಿವಾರ ದಾವಣಗೆರೆಗೆ ಬಂದಿದ್ದು, ಹಣವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದೆ. ಆದಾಯ ತೆರಿಗೆ ಇಲಾಖೆ ನಿಯಮಗಳ ಪ್ರಕಾರ ಮುಂದಿನ ತನಿಖೆ ಕೈಗೊಳ್ಳಲಿದೆ ಎಂದು ಎಸ್ಪಿ ಹನುಮಂತರಾಯ ತಿಳಿಸಿದರು.

‘ಕಲಬುರ್ಗಿಯ ಜ್ಯುವೆಲರಿ ಶಾಪ್‌ನ ಮಾಲೀಕ ಶ್ರೀಪಾಲ್ ಅವರಿಗೆ ಸೇರಿದ ಹಣವಾಗಿದೆ. ಅವರನ್ನು ಕರೆಸಿದ ಅಧಿಕಾ
ರಿಗಳು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ.ಶ್ರೀಪಾಲ್ ಅವರಿಗೆ ಇಲ್ಲಿ ಸಂಬಂಧಿಕರು ಇದ್ದು, ಇಲ್ಲಿಯೇ ಆಸ್ತಿ ಖರೀದಿಸಲು ಅಂಗಡಿ ಸಿಬ್ಬಂದಿ ಬಳಿ ಹಣ ನೀಡಿ ಕಳಿಸಿದ್ದರು’ ಎನ್ನಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.