ADVERTISEMENT

₹ 5 ಸಾವಿರ ಪರಿಹಾರ ಧನ: ನೋಂದಣಿ ದಿನಾಂಕ ಮುಂದೂಡಿಕೆ ಸವಿತಾ ಸಮಾಜ ಮನವಿ

​ಪ್ರಜಾವಾಣಿ ವಾರ್ತೆ
Published 28 ಜೂನ್ 2020, 16:40 IST
Last Updated 28 ಜೂನ್ 2020, 16:40 IST
ಕೋವಿಡ್–19 ನಿಂದಾಗಿ ತೊಂದರೆಗೀಡಾದ ಕ್ಷೌರಿಕರಿಗೆ ನೀಡುವ ₹5 ಸಾವಿರ ಪರಿಹಾರ ಪಡೆಯಲು ಸರ್ಕಾರ ವಿಧಿಸಿರುವ ಪರವಾನಗಿ ಕಡ್ಡಾಯ ನೀತಿಯನ್ನು ಸರಳೀಕರಣಗೊಳಿಸುವಂತೆ ದಾವಣಗೆರೆಯಲ್ಲಿ ಸವಿತಾ ಸಮಾಜ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಕೋವಿಡ್–19 ನಿಂದಾಗಿ ತೊಂದರೆಗೀಡಾದ ಕ್ಷೌರಿಕರಿಗೆ ನೀಡುವ ₹5 ಸಾವಿರ ಪರಿಹಾರ ಪಡೆಯಲು ಸರ್ಕಾರ ವಿಧಿಸಿರುವ ಪರವಾನಗಿ ಕಡ್ಡಾಯ ನೀತಿಯನ್ನು ಸರಳೀಕರಣಗೊಳಿಸುವಂತೆ ದಾವಣಗೆರೆಯಲ್ಲಿ ಸವಿತಾ ಸಮಾಜ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.   

ದಾವಣಗೆರೆ: ಕೋವಿಡ್–19 ನಿಂದಾಗಿ ತೊಂದರೆಗೀಡಾದ ಕ್ಷೌರಿಕರಿಗೆ ನೀಡುವ ₹5 ಸಾವಿರ ಪರಿಹಾರ ಪಡೆಯಲು ಸರ್ಕಾರ ವಿಧಿಸಿರುವ ಪರವಾನಗಿ ಕಡ್ಡಾಯ ನೀತಿಯನ್ನು ಸರಳೀಕರಣಗೊಳಿಸುವಂತೆ ಸವಿತಾ ಸಮಾಜ ಸಂಘ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.

ನೋಂದಣಿಗೆ ಜೂನ್ 30 ಕಡೆಯ ದಿನವಾಗಿದ್ದು, ಅಧಿಕಾರಿಗಳು ಉದ್ಯೋಗ ದೃಢೀಕರಣ ಪತ್ರಕ್ಕೆ ಸಹಿ ಹಾಕುವ ಕಾರ್ಯ ನಡೆಯುತ್ತಿರುವುದರಿಂದ ಸೇವಾ ಸಿಂಧುವಿನಲ್ಲಿ ಅಪ್‌ಲೋಡ್ ಮಾಡಲು ಆಗಿಲ್ಲ. ಆದ್ದರಿಂದ ದಿನಾಂಕವನ್ನು ಮುಂದೂಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಬಿಪಿಎಲ್ ಫಲಾನುಭವಿಗಳಿಗೆ ಮಾತ್ರ ಹೇಳಿದ್ದು, ಕೆಲವರ ಹೆಸರನ್ನು ಕೈಬಿಡಲಾಗಿದೆ. ಅಧಿಕಾರಿಗಳು ಸ್ಥಳ ತನಿಖೆ ಮಾಡಿ ಪರಿಶೀಲಿಸಿ ನಿಜವಾದ ಫಲಾನುಭವಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದರು. ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಪರಿಹಾರ ನೀಡುವ ಷರತ್ತನ್ನು ಸಡಿಲಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ADVERTISEMENT

ಗ್ರಾಮೀಣ ಭಾಗಗಳಲ್ಲಿ ಕ್ಷೌರಿಕರಿಗೆ ಸರಿಯಾದ ಮನೆ ಇಲ್ಲ. ಕೆಲವರು ಫುಟ್‌ಪಾತ್ ಹಾಗೂ ಮುರುಕಲು ಚೇರ್‌ಗಳಲ್ಲಿ ಇಟ್ಟುಕೊಂಡು ವೃತ್ತಿನಿರತರಾಗಿದ್ದಾರೆ. ಕೆಲವರು ದವಸ ಧಾನ್ಯಗಳಿಗೆ ಮನೆ ಮನೆ ತಿರುಗಿ ಕೆಲಸ ಮಾಡುತ್ತಿದ್ದು, ಅವರಿಗೆ ಪರವಾನಗಿ ಇರುವುದಿಲ್ಲ. ಇದನ್ನು ಪರಿಶೀಲನೆ ಮಾಡಬೇಕು ಎಂದು ಸಂಘದ ಅಧ್ಯಕ್ಷ ರಂಗಸ್ವಾಮಿ ಮನವಿ ಮಾಡಿದ್ದಾರೆ.

ಕಾರ್ಯದರ್ಶಿ ಪರಶುರಾಂ, ಖಜಾಂಚಿ ಕರಿಬಸಪ್ಪ ಮನವಿ ಸಲ್ಲಿಸುವ ವೇಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.