ADVERTISEMENT

ದಾವಣಗೆರೆ: ಪ್ರಯೋಗಾಲಯಕ್ಕೆ 10 ಮಾದರಿ ರವಾನೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2020, 14:46 IST
Last Updated 3 ಏಪ್ರಿಲ್ 2020, 14:46 IST
ಮಹಾಂತೇಶ ಬೀಳಗಿ
ಮಹಾಂತೇಶ ಬೀಳಗಿ   

ದಾವಣಗೆರೆ: ಕೋವಿಡ್–19 ಸಂಬಂಧ 10 ಮಾದರಿಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ಶುಕ್ರವಾರ ಮೂರು ಮಾದರಿಗಳ ಫಲಿತಾಂಶ ಕೈಸೇರಿದ್ದು, ನೆಗೆಟಿವ್ ಬಂದಿವೆ. ಈವರೆಗೆ ಕಳುಹಿಸಿದ್ದ 48 ಮಾದರಿಗಳಲ್ಲಿ ಕೊರೊನಾ ಸೋಂಕು ಇಲ್ಲದಿರುವುದು ದೃಢಪಟ್ಟಿದ್ದು, ಮೂರು ಮಾದರಿಗಳಲ್ಲಿ ಮಾತ್ರ ಕೊರೊನಾ ಸೊಂಕು ಇರುವುದು ಖಚಿತಪಟ್ಟಿದೆ ಎಂದು ತಿಳಿಸಿದ್ದಾರೆ.

ಚನ್ನಗಿರಿ ತಾಲ್ಲೂಕಿನಿಂದ ಇಬ್ಬರು ದೆಹಲಿಗೆ ಹೋಗಿ ಬಂದವರನ್ನು ಸೂಪರ್‌ವೈಸ್ ಕ್ವಾರಂಟೈನ್‌ ಸೆಂಟರ್‌ನಲ್ಲಿ ಇರಿಸಿದ್ದು, ಮಾರ್ಚ್‌ 14ರ ನಂತರ ದೆಹಲಿ ಪ್ರವಾಸ ಕೈಗೊಂಡು ಹಿಂದಿರುಗಿದ 6 ಜನರನ್ನು ಇನ್‌ಸ್ಟಿಟ್ಯೂಷನಲ್ ಕ್ವಾರಂಟೈನ್ ಸೆಂಟರ್‌ನಲ್ಲಿ ನಿಗಾವಣೆಗಾಗಿ ಇರಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ADVERTISEMENT

3 ಮಂದಿಯನ್ನು ಹೊಸದಾಗಿ ಪಟ್ಟಿ ಮಾಡಲಾಗಿದ್ದು, ಈವರೆಗೆ 376 ಮಂದಿಯನ್ನು ಅವಲೋಕನ ಮಾಡಲಾಗಿದೆ. ಅವರಲ್ಲಿ 13 ಮಂದಿ 28 ದಿನಗಳ ಅವಲೋಕನ ಅವಧಿಯನ್ನು ಮುಗಿಸಿದ್ದಾರೆ. 15 ಮಂದಿ 14 ದಿನಗಳ ಅವಲೋಕನ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. 45 ಮಂದಿಯನ್ನು ಮನೆಯಲ್ಲೂ ಹಾಗೂ ಹೊಸದಾಗಿ ಇಬ್ಬರು ಸೇರಿ ಒಟ್ಟು 31ಮಂದಿಯನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ.

ಶುಕ್ರವಾರ ಇಬ್ಬರು ಸೇರಿ ಈವರೆಗೆ 26 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಈವರೆಗೆ 12 ಮಂದಿಯನ್ನು ಸೂಪರ್‌ವೈಸ್ ಕ್ವಾರಂಟೈನ್ ಸೆಂಟರ್‌ನಲ್ಲಿ ಇರಿಸಿದ್ದು,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.