ADVERTISEMENT

11 ರೈತರಿಗೆ ಮನೆಯಲ್ಲೇ ನಿಗಾ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2020, 10:14 IST
Last Updated 24 ಮಾರ್ಚ್ 2020, 10:14 IST
ಹರಪನಹಳ್ಳಿ ತಾಲ್ಲೂಕಿನ ರೈತರೊಬ್ಬರಿಗೆ ಹೋಮ್ ಕ್ವಾರಂಟೈನ್‌ ಮುದ್ರೆ ಒತ್ತಿರುವುದು
ಹರಪನಹಳ್ಳಿ ತಾಲ್ಲೂಕಿನ ರೈತರೊಬ್ಬರಿಗೆ ಹೋಮ್ ಕ್ವಾರಂಟೈನ್‌ ಮುದ್ರೆ ಒತ್ತಿರುವುದು   

ಹರಪನಹಳ್ಳಿ: ಕೊರೊನಾ ವೈರಸ್‌ ಸಂಬಂಧ ಸೀಡ್ಸ್ ಅಧ್ಯಯನಕ್ಕೆ ವಿದೇಶಕ್ಕೆ ತೆರಳಿ ವಾಪಸಾಗಿರುವ ತಾಲ್ಲೂಕಿನ 11 ರೈತರಿಗೆ ಹೋಮ್ ಕ್ವಾರಂಟೈನ್‌ನಲ್ಲಿ ಇರುವಂತೆ ಮುದ್ರೆ ಒತ್ತಲಾಗಿದೆ ತಾಲ್ಲೂಕು ವೈದ್ಯಾಧಿಕಾರಿ ಡಾ.ಇನಾಯತ್ ತಿಳಿಸಿದ್ದಾರೆ.

ಜರ್ಮನಿಗೆ ತೆರಳಿ ಅಲ್ಲಿನ ಸೀಡ್ಸ್ ಬೆಳೆಗಳ ಬಗ್ಗೆ ಅಧ್ಯಯನ ಮಾಡಿದ್ದ ರೈತರು ಮಾರ್ಚ್‌ 9ರಂದು ತಮ್ಮ ಸ್ವಂತ ಸ್ಥಳಗಳಿಗೆ ಮರಳಿದ್ದಾರೆ. ಆದರೆ ಅವರಲ್ಲಿ ಕೊರೊನಾ ವೈರಸ್‌ ಲಕ್ಷಣಗಳು ಕಂಡುಬಂದಿಲ್ಲ. ವಿದೇಶದಿಂದ ವಾಪಸ್ ಆಗಿರುವುದರಿಂದ ಮುಂಜಾಗ್ರತಾ ಕ್ರಮವಾಗಿ 14 ದಿವಸ ಮನೆಯಲ್ಲಿ ಇರುವಂತೆ ಸೂಚಿಸಲಾಗಿದೆಟ ಎಂದು ಹೇಳಿದರು.

ಯಾವುದೇ ವ್ಯಕ್ತಿ ವಿದೇಶಕ್ಕೆ ಹೋಗಿ ಬಂದ ತಕ್ಷಣ ವೈರಸ್ ಲಕ್ಷಣಗಳು ಇವೆ ಎಂದು ಯಾವುದೇ ಸುಳ್ಳು ಸುದ್ದಿ ಹರಡಬಾರದು. ವಿದೇಶಕ್ಕೆ ಹೋಗಿ ಬಂದ ತಕ್ಷಣ ರೋಗ ಇದೆ ಎಂದು ದೃಢಪಡಿಸುವ ನಿಟ್ಟಿನಲ್ಲಿ ವೈದ್ಯರು ಕೆಲಸ ಮಾಡುತ್ತಿದ್ದಾರೆ. ಸುಳ್ಳು ಸುದ್ದಿ ಹರಡುವ ಬದಲು ವಿದೇಶಕ್ಕೆ ಹೋಗಿ ಬರುವವರ ಬಗ್ಗೆ ಆರೋಗ್ಯ ಮತ್ತು ಪೊಲೀಸ್ ಇಲಾಖೆಗೆ ಮಾಹಿತಿ ಕೊಟ್ಟು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.